“ಶ್ರಾವಣ” – ವರ್ಷದ ಹನ್ನೆರಡು ಮಾಸಗಳಲ್ಲಿಯೇ ಪವಿತ್ರ ಮಾಸ:ಸಾವಳಗಿ ಶ್ರೀಗಳು

ಕಲಬುರಗಿ:ಜು.30:ವರ್ಷದ ಹನ್ನೆರಡು ತಿಂಗಳ ಮಾಸಗಳಲ್ಲಿಯೇ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾದ ಮಾಸ ಯಾವುದಾದರೂ ಇದ್ದರೆ ಅದು ಶ್ರಾವಣ ಮಾಸ. ಹಾಗಾಗಿ ಆ ಪವಿತ್ರ ಮಾಸದಲ್ಲಿ ಒಳ್ಳೆಯದನ್ನೆ ಶ್ರವಣ ಮಾಡಬೇಕೆಂದು ಈ ರೀತಿಯ ಸತ್ಪುರುಷರ ಜೀವನ ಚರಿತ್ರೆ ಇರುವಂತಹ ಪುರಾಣ ಪ್ರವಚನ ಆಲಿಸುವುದರೊಂದಿಗೆ ನಮ್ಮ ಜೀವನ ಸಾರ್ಥಕಗೊಳಿಸಬೇಕೆನ್ನುತ ನುಡಿದಂತೆ ನಡೆದು ಪವಾಡ ಪುರುಷರಾದ ತಮ್ಮ ದೇಹವನ್ನೆ ವಿಭೂತಿ ರೂಪದಲ್ಲಿ ಭಕ್ತರಿಗೆ ಸಮರ್ಪಿಸಿದ ಶಿವಲಿಂಗೇಶ್ವರ ಪುರಾಣ ಕೇಳಿ ನಾವು ನಿವೆಲ್ಲರೂ ಪುನೀತರಾಗಬೇಕೆಂದು ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆಯಲ್ಲಿರುವ ವಿದ್ಯಾನಗರ ವೆಲ್‍ಫೆರ ಸೊಸೈಟಿಯ ಆಶ್ರಯದಲ್ಲಿ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಸಾವಳಗಿ ಶ್ರೀ ಶಿವಲಿಂಗೇಶ್ವರ ಮಹಾ ಪುರಾಣ ಉದ್ಘಾಟಿಸಿದ ಸಾವಳಗಿ ಸಂಸ್ಥಾನ ಮಠದ ಶ್ರೀ ಮ.ನ.ಪ್ರ ಗುರುನಾಥ ಮಹಾಸ್ವಾಮಿಗಳು ನೆರೆದ ಭಕ್ತರಿಗೆ ಆಶೀರ್ವಚನ ನೀಡಿದರು.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಹರಾಜ ಪೇಠದ ವೇ.ಮೂ. ಶ್ರೀ ಪ್ರಭಯ್ಯ ಶಾಸ್ತ್ರೀಗಳು ಪುರಾಣದ ಮೊದಲನೇ ಅಧ್ಯಾಯ ಪ್ರಾರಂಭಿಸಿದರು. ವಾರ್ಡ ನಂ. 45ರ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ವೆಂಕಮ್ಮ ಜಿ. ಗುತ್ತೇದಾರ ಅತಿಥಿಗಳಾಗಿ ಆಗಮಿಸಿದ್ದರು. ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಉಮೇಶ ಶೆಟ್ಟಿ ಹಾಗೂ ಕಾರ್ಯದರ್ಶಿ ಶಿವರಾಜ ಅಂಡಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶಿರಗುಪ್ಪ ತಾಲೂಕಿನ ಹಳಕೋಟೆಯ ಪಂಪಾಪತಿ ಗವಾಯಿಗಳಿಂದ ನಡೆದ ಸಂಗೀತ ಕಾರ್ಯಕ್ರಮಕ್ಕೆ ಶಂಭುಲಿಂಗ ಪಾಟೀಲ ಧುದನಿ ಅವರಿಂದ ತಬಲಾ ಸಾಥ್ ನೀಡಿದರು.

ಕಾರ್ಯಕ್ರಮದಲ್ಲಿ ವಿರೇಶ ನಾಗಶೆಟ್ಟಿ, ಕರಣ ಆಂದೋಲಾ, ಶಶಿಧರ್ ಪ್ಯಾಟಿ, ಸಂಗಮೇಶ ಹೆಬ್ಬಾಳ, ಅಮೀತ್ ಜೀವಣಗಿ, ಅಮೀತ್ ಸಿಕೇದ, ಅನೀಲಕುಮಾರ ನಾಗೂರ, ಶಿವರಾಜ ಪಾಟೀಲ, ತರುಣಶೇಖರ್ ಬಿರಾದಾರ, ವಿದ್ಯಾನಗರ ವೆಲ್‍ಫೆರ್ ಸೊಸೈಟಿಯ ಹಾಗೂ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಪಧಾಧಿಕಾರಿಗಳು ಅಲ್ಲದೆ ಬಡೆಪೂರ ಕಾಲೋನಿ, ಪ್ರಗತಿ ಕಾಲೋನಿ, ಗುಬ್ಬಿ ಕಾಲೋನಿ, ಸ್ವಸ್ತಿಕ ನಗರ ಹೀಗೆ ವಿವಿಧ ಬಡಾವಣೆಯ ಭಕ್ತರು ಪುರಾಣ ಕೇಳಲಿಕ್ಕೆ ಆಗಮಿಸಿದ್ದರು ಎಂದು ವಿದ್ಯಾನಗರ ವೆಲ್‍ಫೆರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.