ಶ್ರಾವಣ ಮಾಸ ವೆಂಕಟೇಶ್ವರನಿಗೆ ವಿಶೇಷ ಅಲಂಕಾರ

ಚಿಕ್ಕಬಳ್ಳಾಪುರ, ಜು- ೩೦- ಶ್ರಾವಣ ಮಾಸದ ಮೊದಲನೇ ಶನಿವಾರ ವೈಷ್ಣವ ಸಂಪ್ರದಾಯವಾದಿಗಳಿಗೆ ಅತ್ಯಂತ ಮಹತ್ವಪೂರ್ಣ ದಿನವಾಗಿದ್ದು ಚಿಕ್ಕಬಳ್ಳಾಪುರದ ಕಂದವಾರಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಮೊದಲನೇ ಶ್ರಾವಣ ಶನಿವಾರದ ಪ್ರಯುಕ್ತ ದೇವರಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿದ್ದು ಬೆಳಗಿನ ಜಾವದಿಂದಲೇ ಭಕ್ತಾದಿಗಳು ತಂಡೋಪತಂಡವಾಗಿ ದೇವಾಲಯಕ್ಕೆ ಆಗಮಿಸಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರ ದರ್ಶನ ಪಡೆದರು.
ಚಿಕ್ಕಬಳ್ಳಾಪುರದ ಕಂದವಾರಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಈ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದು ಶ್ರಾವಣ ಮಾಸದಲ್ಲಿ ಭಕ್ತ ವೃಂದ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುವುದು ಪ್ರತಿವರ್ಷದ ವಾಡಿಕೆ ಅಂತೆಯೇ ಈ ದಿನ ಮೊದಲನೆ ಶ್ರಾವಣ ಶುಕ್ರವಾರ ವಾಗಿದ್ದು ಇಲ್ಲಿನ ದೇವರಿಗೆ ಏರ್ಪಡಿಸಿದ್ದ ಹೂವಿನ ಅಲಂಕಾರ ಭಕ್ತರು ದರ್ಶಿಸಿ ಭಕ್ತಿ ಭಾವ ಪರವಶತೆ ಹೊಂದಿದರು