ಶ್ರಾವಣ ಮಾಸದ ವಿಶೇಷ ಪೂಜೆ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಿದ ಉಮೇಶ ಕೆ. ಮುದ್ನಾಳ

ಯಾದಗಿರಿ, ಆ.18: ಜಿಲ್ಲೆಯ ವಡಗೇರಿ ತಾಲ್ಲೂಕಿನ ಗುರುಸುಣಿಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಒಂದು ತಿಂಗಳ ಶ್ರಾವಣ ಮಾಸದ ವಿಶೇಷ ಪೂಜಾ ಅಭಿಯಾನಕ್ಕೆ ಬಾಜ ಭಜಂತ್ರಿಗಳ ಮುಖಾಂತರ ರಸ್ತೆಯಲ್ಲಿ ಮೆರವಣಿಗೆ ಮಾಡುವ ಮುಖಾಂತರ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅದ್ದೂರಿಯಾಗಿ ಚಾಲನೆ ನೀಡಿದರು.
ಈ ಅಭಿಯಾನವು ಗುರುಸುಣಿಗಿ ಗ್ರಾಮದಿಂದ ಆ.17 ರಿಂದ ಆರಂಭವಾಗಿದ್ದು 15-09-2023 ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ ಪ್ರತಿ ಹೋಬಳಿ ಮಟ್ಟದಲ್ಲಿ ತೆರಳಿ ಪೂಜೆ ಸಲ್ಲಿಸುವ ಹಾಗೂ ಅವರ ಕುರಿತು ಜಾಗೃತಿ ಹಾಗೂ ಸಮಾಜಿಕ ಜಾಗೃತಿ ಮೂಡಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಮಾತನಾಡಿ ತಿಳಿಸಿದರು.
ಚೌಡಯ್ಯ ನವರ ತತ್ವಾದರ್ಶ, ವಚನಗಳನ್ನು ಪ್ರತಿಯೊಬ್ಬರು ಪಾಲಿಸಬೇಕು, ಶ್ರೇಷ್ಟ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರು ಕೋಲಿ ಸಮಾಜಕ್ಕೆ ಸೀಮಿತ ಅಲ್ಲ ಕಠೋರ ವಚನಗಳು ಬರೆಯುವ ಮೂಲಕ ಸರ್ವ ಸಮುದಾಯಕ್ಕೆ ಸೇರಿದ ಶರಣರಾಗಿ ಹೊರಹೊಮ್ಮಿದ್ದಾರೆ ಎಂದು ಹೆಳಿದರು.
ಹನ್ನೆರಡು ತಿಂಗಳಲ್ಲಿಯೇ ಶ್ರೇಷ್ಠವಾಗಿರುವ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದಲ್ಲಿ ಭಜನೆ, ಹಾಗೂ ದುಷ್ಚಟದಿಂದ ದೂರವಾಗಿರುವ ಮಾಸವಾದ ಶ್ರಾವಣದಲ್ಲಿ ರೈತರು ಭಕ್ತಿ ಸಮರ್ಪಣೆ ಮಾಡುತ್ತಾರೆ.
ಈ ತಿಂಗಳಲ್ಲಿನ ಸೋಮವಾರದಂದು ವಿಶೆಷವಾಗಿ ಎತ್ತಿಗೆ ಗಳೆ ಹೊಡೆಯುವುದನ್ನೂ ಮಾಡುವುದಿಲ್ಲ ಇಂತಹ ಪವಿತ್ರ ಶ್ರಾವಣ ಮಾಸದಲ್ಲಿ ತಿಂಗಳಾಂತ್ಯದ ವರೆಗೆ ರಾತ್ರಿ ವಿಶೇಷ ಭಜನೆ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತವೆ. ವಿವಿಧ ಕಸರತ್ತಿನ ಕಾರ್ಯಕ್ರಮಗಳು ಅಂದರೆ ಚಕ್ಕಡಿ ಭಾರ ಎಳೆಯುವುದು, ಕಲ್ಲು ಎತ್ತುವುದು, ಕೈಕುಸ್ತಿ ಗಳು ನಡೆಯುತ್ತವೆ.
ಹಿರಿಯರು ರೂಪಿಸಿಕೊಟ್ಟ ಇಂತಹ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮತ್ತು ಇವುಗಳನ್ನು ವರ್ಷದುದ್ದಕ್ಕೂ ಆಚರಿಸಬೇಕು ಎಂದು ಹೇಳಿದರು.
ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡದೇ ಇಂತಹ ಕ್ರೀಡೆಗಳನ್ನು ಗುರ್ತಿಸಿ ನಶಿಸಿ ಹೋಗದಂತೆ ಒತ್ತುಕೊಡಬೇಕು ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವದ ವೇಳೆ ಇಂತಹ ಆಟಗಾರರನ್ನು ಗುರ್ತಿಸುವ ಇವರಿಗೆ ಕ್ರೀಡಾಕೂಟ ಏರ್ಪಡಿಸುವ ಮೂಲಕ ಗ್ರಾಮೀಣ ಸಂಸ್ಕøತಿಯನ್ನು ಜೀವಂತವಾಗಿಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗುರುಸುಣಿಗಿ ಗ್ರಾಪಂ ನೂತನ ಅಧ್ಯಕ್ಷೆ ಆಗಿ ಆಯ್ಕೆಯಾದ ರತ್ನಮ್ಮ ಅವರ ಪತಿ ಶಿವಕುಮಾರ ಇವರಿಗೆ ಜಂಟಿಯಾಗಿ ಸನ್ಮಾನಿಸಲಾಯಿತು.
ಇದಲ್ಲದೇ ಬಂದಯ್ಯ ಸ್ವಾಮಿ, ಗಂಗಾಧರ, ಹುಸೇನ್ ಸಾಬ, ಸಾಬಣ್ಣ, ಮಾದೇವಪ್ಪ ಇವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಶರಣಯ್ಯ ಸ್ವಾಮಿ, ಸಿದ್ದಲಿಂಗಪ್ಪ, ಹಣಮಂತ, ಸಿದ್ದಪ್ಪ, ಈಶಪ್ಪ, ಮಲ್ಲಪ್ಪ, ಶ್ರೀಶೈಲ, ಚಂದಪ್ಪ, ರವಿ, ಭೀಮರಾಯ, ರುದ್ರಲಿಂಗ, ಸಾಬಣ್ಣ, ಸಿದ್ದಪ್ಪ, ಮಲ್ಲಪ್ಪ, ಬಸಲಿಂಗಪ್ಪ, ಪುಟ್ಟು, ಹಳ್ಳೆಪ್ಪ, ಕಾಶಿನಾಥ, ದೇವಮ್ಮ, ನಾಗರಾಜ, ರೆಡ್ಡಿ, ಯಲ್ಲಮ್ಮ, ಸೋಪಮ್ಮ, ನೀಲಮ್ಮ, ನಾಗಮ್ಮ, ಸಿದ್ದಲಿಂಗಮ್ಮ, ಅನಿಲ್ ಇನ್ನಿತರರು ಇದ್ದರು.