ಶ್ರಾವಣ ಮಾಸದ ವಚನ ಜ್ಯೋತಿ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.01: ಶರಣರ ವನಚನಗಳನ್ನು ಅಳವಡಿಸಿಕೊಂಡಲ್ಲಿ ಜೀವನದ ಮೌಲ್ಯವನ್ನು ಹೆಚ್ಚಿಸುತ್ತವೆ ಎಂದು ಗುರು ಬಸವ ಮಠದ ಪೀಠಾಧಿಪತಿ ಬಸವಭೂಷಣ ಸ್ವಾಮೀಜಿ ಹೇಳಿದರು.
ನಗರದ ಕೃಷ್ಣನಗರದ ಅಮರೇಶ್ವರಿ ಮಲ್ಲಿಕಾರ್ಜುನಗೌಡ ನಿವಾಸದಲ್ಲಿ ದಿಡ್ಡೆಪ್ಪಗೌಡ ಕುಟುಂಬದವರಿಂದ ಭಾನುವಾರ ನಡೆದ ಶ್ರಾವಣ ಮಾಸದ ವಚನ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಪ್ರಾರ್ಥನೆ, ಪೂಜೆ ಸಲ್ಲಿಸಿದೆ, ಪ್ರತಿ ನಿತ್ಯವು ಇಷ್ಟಲಿಂಗ ಪೂಜೆ ಪ್ರಾರ್ಥನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಉಂಟಾಗಿ ಚೈತನ್ಯದಿಂದ ಕಾಯಕ ಕಾರ್ಯೋನ್ಮುಖರಾಗಲು ಸಹಕಾರಿಯಾಗಲಿದೆ, 12ನೇ ಶತಮಾನದ ಅನೇಕ ವಚನಕಾರರ ವಚನಗಳನ್ನು ಪ್ರತಿ ದಿನ ಪಠಿಸುವುದರಿಂದ ವಚನಗಳಲ್ಲಿನ ತತ್ವ, ಆದರ್ಶ, ಸಿದ್ದಾಂತಗಳ ಅರಿವು ನಮಗಾಗುತ್ತದೆ. ಇದರಿಂದ ನಮ್ಮ ಜೀವನದಲ್ಲಿ ವಚನಗಳ ಸಾರವನ್ನು ಅರಿತು ಬದುಕಲು ದಾರಿದೀಪವಾಗಲಿದೆ.    ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಹಬ್ಬಗಳು ಪ್ರಕೃತಿಗೆ ನಂಟು ಇವೆ, ಸಕಾಲ ಜೀವ ರಾಶಿಗಳನ್ನು ಪೂಜಿಸುವ ಪುಣ್ಯದ ಹಬ್ಬವಾಗಿದೆ, ಶ್ರಾವಣ ಮಾಸದಲ್ಲಿ ಮಹಿಳೆಯರು, ಮಕ್ಕಳು ಪುರುಷರು ನಿತ್ಯ ಪೂಜಿಸುವಂತ ಹಬ್ಬವಾಗಿದೆ ಎಂದು ತಿಳಿಸಿದರು.
ವಚನಗಳ ಸಂಶೋಧನಾರ್ಥಿ ಜವಳಗೇರಿ ಗ್ರಾಮದ ದೊಡ್ಡ ಹನುಮಂತಪ್ಪ ಬಸವಣ್ಣನವರ ಕುರಿತು ಉಪನ್ಯಾಸ ನೀಡಿದರು.
ಬಸವ ಬಳಗದ ತಾ.ಅಧ್ಯಕ್ಷ ಡಾ.ಎನ್.ಎಂ.ಶಿವಪ್ರಕಾಶ. ಭಕ್ತರಾದ ಆರ್.ಸಿ.ಪಂಪನಗೌಡ, ಶಾಂತಮೂರ್ತಿಸ್ವಾಮಿ, ಪುಷ್ಪನಾಗನಗೌಡ, ಅಮರೇಶ್ವರಿ, ಮಲ್ಲಿಕಾರ್ಜುನಗೌಡ ಇದ್ದರು.