ಶ್ರಾವಣ ಮಾಸದ ಮೂರನೇ ಸೋಮವಾರ ನಂದೇಶ್ವರನ ಜಾತ್ರೆ

ಬಸವನಬಾಗೇವಾಡಿ:ಆ.5: ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ನಡೆಯಲಿರುವ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರಜಾತ್ರೆಯನ್ನ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲಾಗುವದು ಎಂದು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಬಸವೇಶ್ವರ(ಮೂಲ ನಂದೀಶ್ವರ) ದೇವಾಲಯದ ಆವರಣದಲ್ಲಿ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಾರಿ ಶ್ರಾವಣ ಮಾಸದಲ್ಲಿ ನಾಲ್ಕು ಸೋಮವಾರಗಳು ಬಂದಿದ್ದು ಮೂರನೇ ಸೋಮವಾರ ನಂದೀಶ್ವರನ ಜಾತ್ರೆಯನ್ನ 5 ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ಜಾತ್ರ ಉತ್ಸವ ಸಮಿತಿ ತಿರ್ಮಾನಿಸಿದೆ ಈ ವರ್ಷದ ಜಾತ್ರಾ ಉತ್ಸ ಸಮಿತಿಗೆ ಅಧ್ಯಕ್ಷರನ್ನಾಗಿ ಮಹಾಂತೇಶ ಆದಿಗೊಂಡ, ಉಪಾಧ್ಯಕ್ಷರನ್ನಾಗಿ ಮನ್ನಾನ ಶಾಬಾದಿ, ಶ್ರೀಕಾಂತ ಕೊಟ್ರಶೆಟ್ಟಿ, ಸುಭಾಸ ಗಾಯಕವಾಡ, ಶ್ರೀಧರ ಕುಂಬಾರ, ಪ್ರಧಾನ ಕಾರ್ಯದರ್ಶಿಯನ್ನಾಗಿ ವಿಶ್ವನಾಥ ಹಿರೇಮಠ, ಸಂಚಾಲಕರನ್ನಾಗಿ ಪಂಚಾಕ್ಷರಿ ಕಾಳಹಸ್ತೇಶ್ವಮಠ, ಕೋಶಧ್ಯಕ್ಷರನ್ನಾಗಿ ಬಸವರಾಜ ಕೋಟಿ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕೂಡಲ ಸಂಗಮ ಪ್ರಾಧಿಕಾರದ ಅಧಿಕಾರಿ ಬಸಪ್ಪ ಪೂಜಾರಿ, ಹಿರಿಯ ಮುಖಂಡರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ರಾಷ್ಟ್ರೀಯ ಬಸವ ಸ್ಯನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಉಮೇಶ ಹಾರಿವಾಳ, ಶೇಖರ ಗೊಳಸಂಗಿ, ಸಂಗಮೆಶ ಒಲೇಕಾರ, ರವಿ ರಾಠೋಡ, ಸುಭಾಸ ಚಿಕ್ಕೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಶೇಖನಗೌಡ ಪಾಟೀಲ, ಸುರೇಶ ಪಾಟೀಲ, ಸಂಗನಬಸು ಪೂಜಾರಿ, ಸೇರಿದಂತೆ ಮುಂತಾದವರು ಇದ್ದರು.