
ಸಿರವಾರ,ಆ.೨೦-
ತಾಲ್ಲೂಕಿನ ಹರವಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಷ.ಬ್ರ.ವಿರುಪಾಕ್ಷ ಪಂಡೀತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಪ್ರಭಾನಂದ ಪಂಡೀತರು ರೌಡಕುಂದ ಹಿರೇಮಠ ವಿರಚಿತ ಅಲ್ಲಪುರ ಮಹಾಯೋಗಿ ಶ್ರೀ ಮಹಾದೇವ ತಾತನ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶ್ರಾವಣ ಮಾಸದಲ್ಲಿ ಇಂತಹ ಪುರಾಣ ಪುಣ್ಯಕಥೆಗಳನ್ನು ಆಲಿಸುವ ಮೂಲಕ ಜೀವನ ಪಾವನಗೊಳಿಕೊಳ್ಳಲು ಕರೆ ನೀಡಿದರು.
ಈ ವೇಳೆ ಶಶಿಧರ ಗೌಡ ಮಾಲಿ ಪಾಟೀಲ, ದೇವಸ್ಥಾನದ ಸಮಿತಿಯ ಅಧ್ಯಕ್ಷ ಶಶಿಧರಗೌಡ ಮಾಲಿ ಪಾಟೀಲ, ಎಸ್. ಮಲಪ್ಪ ಗೌಡ, ಕೆ. ಶರಣಪ್ಪ ಗೌಡ, ಎಚ್. ಮಲ್ಲಿಕಾರ್ಜುನ ಗೌಡ, ಈರಣ್ಣ ಗೌಡ ದಳಪತಿ, ಎಮ್. ಬಸಪ್ಪ ಗೌಡ, ರಾಜಶೇಖರಪ್ಪ ಮಾಸ್ತರ, ಟಿ. ರಾಜಶೇಖರ ಗೌಡ, ಎಮ್. ಶಂಕರ ಗೌಡ, ಜಿ. ರಾಮನಗೌಡ, ಎಮ್. ಶರಣಬಸವ ಗೌಡ, ಎಸ್. ಬಸಪ್ಪ ಗೌಡ, ಕೆ. ಮಲ್ಲಿಕಾರ್ಜುನ ಗೌಡ, ಟಿ. ರವಿಗೌಡ, ಸುರೇಶ ಗೌಡ, ಶಿವು ಮೂರ್ತಿ ಸ್ವಾಮಿ, ಪ್ರಶಾಂತ ಶಾಸ್ತ್ರಿ, ಕೆ. ವಿರುಪಾಕ್ಷಿ ಗೌಡ, ಪಂಪಣ್ಣ ತಾತ, ಆದಿಬಸವಗೌಡ, ಗೋಪಾಲ ನಾಯಕ ಹರವಿ, ಪೂಜಾರಿ ಶರಣಪ್ಪ, ಎಮ್. ಮಾರಪ್ಪ ನಾಯಕ, ಜಿ. ನಾಗಪ್ಪ, ಪ್ರವಚನಕಾರರಾದ ವೇ.ಮೂ.ಬಸವಲಿಂಗಯ್ಯ ಶಾಸ್ತ್ರಿಗಳು ದಿದ್ದಿಗಿ, ಗವಾಯಿಗಳಾದ ಶಶಿಧರ ಹಿರೇಮಠ, ತಬಲವಾದಕರಾದ ಮಲ್ಲಿಕಾರ್ಜುನ ಉಮಳಿಹೊಸೂರು ಹಾಗು ಹರವಿ, ಮಾಡಿಗಿರಿ, ಕೆ.ಗುಡದಿನ್ನಿ, ಹಳ್ಳಿ ಹೊಸೂರು, ನೀರಮಾನವಿ, ಗ್ರಾಮಗಳ ಸದ್ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.