ಶ್ರಾವಣ ಮಾಸದ ನಿಮಿತ್ಯ ಕುಂಕುಮಾರ್ಚನೆ

ತಾಳಿಕೋಟೆ:ಸೆ.7: ಶ್ರಾವಣ ಮಾಸದ ನಿಮಿತ್ಯವಾಗಿ ಬುಧವಾರರಂದು ಪಟ್ಟಣದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮವು ಶ್ರೀ ಗಾಯಿತ್ರಿ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ನಡೆಸಲಾಯಿತು.

ಕಾರ್ಯಕ್ರಮಕ್ಕೂ ಮುಂಚೆ ಶ್ರೀ ಕಾಳಿಕಾದೇವಿ ಮಹಾ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮ ನಡೆಸಲಾಯಿತ್ತಲ್ಲದೇ ಸೇರಿದ ನೂರಾರು ಮಹಿಳೆಯರು ಪರಸ್ಪರ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡು ನಾಡಿನಲ್ಲಿ ಸುಖ ಸಮೃದ್ದಿ ಶ್ರೀ ದೇವಿಯು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಮಯದಲ್ಲಿ ಗಾಯಿತ್ರಿ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಜಗದೇವಿ ಸರಾಫ್, ವಿಜಯಲಕ್ಷ್ಮೀ ಪಂಚಾಳ, ದ್ರಾಕ್ಷಾಯಿಣಿ ಚಿಕ್ಕೋಡಿ, ಯಶೋಧಾ ಪತ್ತಾರ, ಸುನೀತಾ ಸೋನಾರ, ನಿರ್ಮಲಾ ಬಡಿಗೇರ, ರೇಖಾ ವರದಪ್ಪನವರ, ಭಾರತಿ ಕಲ್ಬುರ್ಗಿ, ಸುಮಾ ದೊಡಮನಿ, ನಾಗರತ್ನ ಬಡಿಗೇರ, ಶಕುಂತಲಾ ಬಡಿಗೇರ, ರಜನಿ ಪತ್ತಾರ, ಸುನಂದಾ ಪತ್ತಾರ, ವಿಮಲಾ ಸಾಲೋಡಗಿ, ಪಾರ್ವತಿ ಬಡಿಗೇರ, ಹಾಗೂ ಶ್ರೀ ಕಾಳಿಕಾ ದೇವಿ ದೇವಸ್ಥಾನ ಟ್ರಸ್ಟ ಕಮಿಟಿ ಅಧ್ಯಕ್ಷ ಶ್ರೀನಿವಾಸ ಸೋನಾರ, ಶ್ರೀನಿವಾಸ ಪತ್ತಾರ, ಆರ್.ಆರ್.ಬಡಿಗೇರ, ರಾಜು ಪತ್ತಾರ, ಸುನೀಲ ವರದಪ್ಪನವರ, ಮೊದಲಾದವರು ಉಪಸ್ಥಿತರಿದ್ದರು.