ಶ್ರಾವಣ ಮಾಸದ ನಿಮಿತ್ತ ನಡೆಯುವ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ : ಖಾಸಮಠದ ಶ್ರೀ

ಗುರುಮಠಕಲ್:ಆ.20: ಪಟ್ಟಣದ ಖಾಸಮಠದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪಯರ್ಂತ ನಡೆಯುವ ಶರಣರ ಜೀವನ ದರ್ಶನ ಅನ್ನುವಂತಹ ಶೀರ್ಷಿಕೆಯಡಿ ಪ್ರವಚನ ಕಾರ್ಯಕ್ರಮ ಸೋಮವಾರ ದಿನಾಂಕ 21-08-2023 ರಿಂದ ಆರಂಭಗೊಂಡು ಸೆಪ್ಟೆಂಬರ್ ದಿನಾಂಕ 17 ರ ವರೆಗೆ ಹಮ್ಮಿಕೊಳ್ಳಲಾಗಿದ್ದು ಪ್ರವಚನ ಕಾರರಾಗಿ ಆಗಮಿಸಲಿರುವ ಬೆಳಗಾವಿ ಜಿಲ್ಲೆಯ ಶಿರಸಂಗಿಯ ಶ್ರೀ ಬಸವ ಮಹಾಂತ ಸ್ವಾಮಿಗಳು ಪ್ರವಚನ ಕಾರರಾಗಿ ಆಗಮಿಸಲಿದ್ದು ಒಂದು ತಿಂಗಳ ಪಯರ್ಂತ ಶ್ರೀ ಮಠದಲ್ಲಿ ಸಾಯಂಕಾಲ ಸಮಯ 6-30 ರಿಂದ ಪ್ರಾರಂಭಗೊಂಡು 7-30 ಕ್ಕೆ ಮಂಗಲವಾಗುವ ಹಾಗೆನೆ ಪ್ರತಿನಿತ್ಯ ಒಂದು ತಿಂಗಳ ಪಯರ್ಂತ ರವಾಗಿ ಬೆಳಿಗ್ಗೆ ಸಮಯ 8-30 ರಿಂದ 10-00 ಗಂಟೆಯವರೆಗೆ ಗುರುಮಠಕಲ ಪಟ್ಟಣದ ಅನೇಕ ಭಕ್ತರ ಮನೆಗಳಲ್ಲಿ ಮನೆಯಲ್ಲಿ ಮಹಾಮನೆ ಮತ್ತು ಮನೆಯಲ್ಲಿ ಸಾಮೂಹಿಕವಾಗಿರುವಂತಹ ಇಷ್ಟ ಲಿಂಗ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇಂತಹ ಕಾರ್ಯಕ್ರಮಗಳಲ್ಲಿ ಶ್ರೀ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪಟ್ಟಣದ ಖಾಸಮಠದ ಶ್ರೀ ಮನ್ ನಿರಂಜನ ಪ್ರಣವ್ ಸ್ವರೂಪಿ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಾಗೇನೆ ಜೊತೆಗೆ ಮುಂದಿನ ತಿಂಗಳ ಸೆಪ್ಟೆಂಬರ್ ದಿನಾಂಕ 17 ರಂದು ಶ್ರಾವಣ ಮಾಸದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಅವೊಂದು ವಿಶೇಷ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು ಹಾಗೆನೆ ಶ್ರಾವಣ ಮಾಸದ ಸಮಾರೋಪ ಸಮಾರಂಭದ ಜೊತೆಗೆ ಯಾದಗಿರಿ ಜಿಲ್ಲೆಯ ನಾಲ್ಕು ಜನ ನೂತನ ಶಾಸಕರುಗಳಿಗೆ ಶ್ರೀ ಮಠದ ಮೂಲಕವಾಗಿ ಅವರಿಗೆ ಗೌರವ ಸಮರ್ಪಣೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಜೊತೆಗೆ ಅದೇ ಸಂದರ್ಭದಲ್ಲಿ ವಿಶೇಷ ವಾಗಿ ಗುಬ್ಬಿಯ ಗೂಡು ಅನ್ನುವ ಪುಸ್ತಕ ಲೋಕಾರ್ಪಣೆ ಶ್ರೀ ಮಠದಲ್ಲಿ ನಡೆತ ಇರುವುದು ಹಾಗೂ ಇದೆ ತಿಂಗಳ 22-08-2023 ಮಂಗಳವಾರ ನಾಗರಪಂಚಮಿ ಹಬ್ಬದ ನಿಮಿತ್ತವಾಗಿ ಬೆಳಿಗ್ಗೆ 11-00 ಗಂಟೆಗೆ ಶ್ರೀ ಮಠದಲ್ಲಿ ನಾಗರಪಂಚಮಿ ಹಬ್ಬದ ನಿಮಿತ್ತವಾಗಿ ನಮ್ಮ ಶಾಲೆಯ ಮಕ್ಕಳಿಗೆ** ಹಾಲು ಮಕ್ಕಳ ಪಾಲು ** ಅನ್ನುವ ಕಾರ್ಯಕ್ರಮ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಠಕ್ಕೆ ಬರುವಂತಹ ಎಲ್ಲಾ ಭಕ್ತರು ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಶ್ರಾವಣ ಮಾಸದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಂದು ತಿಂಗಳ ಪಯರ್ಂತ ನಡೆಯುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಖಾಸಮಠದ ಪರಮಪೂಜ್ಯರು ಭಕ್ತರಲ್ಲಿ ಪತ್ರಿಕೆ ಹೇಳಿಕೆ ಮೂಲಕ ತಿಳಿಸಿದರು.