ಶ್ರಾವಣ ಮಾಸದ ನಾಗ ಚತುರ್ಥಿ ಪ್ರಯುಕ್ತ ನಾಗಪ್ಪನಿಗೆ ಹಾಲೆರೆದ ಭಕ್ತರು

”ಸಂಜೆವಾಣಿ ವಾರ್ತೆಸಿರಿಗೇರಿ ಆ.20. ಗ್ರಾಮದಲ್ಲಿ ಮತ್ತು ಸಿರಿಗೇರಿ ಹೋಬಳಿ ಇತರೆ ಗ್ರಾಮಗಳಲ್ಲಿ ಶ್ರಾವಣ ಮಾಸದ ನಾಗ ಚೌತಿ ಪ್ರಯುಕ್ತ ಮೊದಲ ದಿನದ ಚೌತಿಯ ದಿನವಾದ ಇಂದು ಭಕ್ತರು ನಾಗಪ್ಪನಿಗೆ ಹಾಲೆರೆಯುವ ಸಂಭ್ರಮ ಕಂಡುಬಂತು. ಹಬ್ಬಗಳ ಮಾಸವೆಂದೇ ಪ್ರತೀತಿ ಇರುವ ಶ್ರಾವಣ ಮಾಸದ ಅಂಗವಾಗಿ ಗ್ರಾಮೀಣ ಭಾಗದಲ್ಲಿ ಹಾಲೆರೆಯುವ ಸಂಪ್ರದಾಯಕ್ಕೆ ಚಾಲನೆ ನೀಡಲಾಗಿದೆ. ಮೊದಲ ಚೌತಿದಿನವಾದ ಇಂದು ಜನರು ತಮ್ಮ ಮನೆಗಳಲ್ಲಿ ಬಗೆಬಗೆಯ ನಾಗಪ್ಪನಿಗೆ ಎಡೆಗೆ ಶ್ರೇಷ್ಠವಾದ ಸಿಹಿ ತಿನಿಸು, ಉಂಡೆಗಳನ್ನು ಮಾಡಿ ತಮ್ಮ ಹತ್ತಿರದ ದೇವಸ್ಥಾನದಲ್ಲಿನ ನಾಗಪ್ಪನ ಮೂರ್ತಿಗೆ ಹಾಲೆರೆದು ಬರುತ್ತಿರುವುದು ಇಂದು ಸಾಮಾನ್ಯವಾಗಿತ್ತು. ಗ್ರಾಮದ ಹುಚ್ಚೇಶ್ವರ ನಗರದ ದ್ಯಾವಮ್ಮನ ಗುಡಿ ಹತ್ತಿರ, ದುಗಲಮ್ಮ ದೇವಸ್ಥಾನದ ಹತ್ತಿರ, ಅಗಸೆಯ ಬಸವಣ್ಣನ ಗುಡಿ ಹತ್ತಿರ, ಗ್ರಾಮದೇವರು ಶ್ರೀ ನಾಗನಾಥೇಶ್ವರ ದೇವಸ್ಥಾನದ ಹತ್ತಿರ, ಜನತಾಕಾಲೋನಿಯ ಬನ್ನಿಮಹಂಕಾಳಮ್ಮ ದೇವಸ್ಥಾನದ ಹತ್ತಿರದ ನಾಗಪ್ಪನ ಕಟ್ಟೆಗಳ ಹತ್ತಿರ ಭಕ್ತರು ಬಂದು ನಾಗಪ್ಪನ ಮೂರ್ತಿಗೆ ಹಾಲೆರೆದು ಎಡೆ ಅರ್ಪಿಸಿದರು.