ಶ್ರಾವಣ ಮಾಸದ ಕಡಬಡ ಸೊಗು


ನರೇಗಲ್ಲ: 14 ಸಮೀಪದ ಅಬ್ಬಿಗೇರಿ ಗ್ರಾಮದ ತಳವಾರ ಓಣಿಯ ಕಡೆ ಶ್ರಾವಣ ಮಾಸದ ಮಂಗಳವಾರದಂದು ಕಡಬಡ ಸೊಗು ಜರುಗಿತು.
ಕಡಬಡ ಸೋಗಿನ ಒಂದು ತಂಡದಲ್ಲಿ 20ರಿಂದ 40 ವೇಷಧಾರಿಗಳಿರುತ್ತಾರೆ. ದೇವಿ, ಬ್ರಹ್ಮ, ವಿಷ್ಣು, ಮಹೇಶ್ವರ, ದೇವೇಂದ್ರ, ರಂಭೆ, ಊರ್ವಶಿ, ಮೇನಕೆ, ರಾಕ್ಷಸರು (ಕಡಬಡ), ಯಮಧರ್ಮ, ಹನುಮಂತ ಹೀಗೆ ಹತ್ತು ಹಲವು ಪೌರಾಣಿಕ ಪಾತ್ರಗಳ ವೇಷಧಾರಿಗಳು ಇರುತ್ತಾರೆ. ವಾಹನ ಮುಂದೆ ದೇವಿ ಕುಣಿತವಿದ್ದರೆ ಆಕೆಯನ್ನು ಕಾಡಲು ರಾಕ್ಷಸರು ಕಾಯುತ್ತಿರುತ್ತಾರೆ. ದೇವಿ ಅವರನ್ನು ಸಂಹರಿಸಲು ಬಂದಾಗ ಆಡುವ ಆಟ ನೋಡುವುದೇ ಒಂದು ಸೊಗಸು ಎಂದು ಬಸವರಾಜ ತಳವಾರ ಹೇಳಿದರು.
ಈ ವೇಳೆಯಲ್ಲಿ ಬಸವರಾಜ ಹಂಚಿನಾಳ,ಗಣೇಶ ನಾಯ್ಕರ,ಹನಮಂತ ಗಾರವಾಡ,ಯಲ್ಲಪ್ಪ ಕಚೆನ್ನವರ,ಕಂಚೆಪ್ಪ ಕುಬಾರ,ಮಲ್ಲಿಕಾರ್ಜುನ ಕಲ್ಯಾಶಾನಿ,ಭಿಮಪ್ಪ ಚಿಕೆನಕೊಪ್ಪ,ಶಿವಪುತ್ರಪ್ಪ ಹಂಚಿನಾಳ, ಬಸವರಾಜ ನಾಯ್ಕರ, ಬಸವರಾಜ ಇಟಗಿ,ಕುಮ್ಮನ್ನ ನಾಯ್ಕರ, ಶಿವಪ್ಪ ಹಂಚಿನಾಳ,ಮಲಯ್ಯ ಮಠಪತಿ, ಶಂಕ್ರಪ್ಪ ಹಳ್ಳಿ,ಸಮಾಜ ಹಿರಿಯರು,ಹಾಗೂ ಯುವಕರು ಇದ್ದರು