ಶ್ರಾವಣ ಮಾಸದಲ್ಲಿ  ವಿಶೇಷ ಪೂಜೆ

ಬಾಳೆಹೊನ್ನೂರು. ಜು-27: ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದಲ್ಲಿ ತಪಗೈದ ಪರಮ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನಡೆಸಲಾಗುವುದೆಂದು ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಅಧ್ಯಕ್ಷರಾದ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.

 ಅವರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಟ್ರಸ್ಟಿನ ಸಮಾವೇಶದಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು. ಪ್ರತಿ ವರುಷದಂತೆ ಈ ವರ್ಷವೂ ಸಹ ಶ್ರಾವಣ ಮಾಸದ ಅಂಗವಾಗಿ ಜುಲೈ 29 ಶುಕ್ರವಾರದಿಂದ ಆಗಸ್ಟ್-27 ಶನಿವಾರದ ವರೆಗೆ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಮಂಗಲ ಮೂರ್ತಿಗೆ ರುದ್ರಾಭೀಷೇಕ, ಅಷ್ಟೋತ್ತರ ಮಹಾಮಂಗಲ ಕಾರ್ಯಕ್ರಮ ಟ್ರಸ್ಟ್ ಸಂಘಟಿಸಿದ್ದು ಪೂಜಾಭಿಷೇಕ ಸಲ್ಲಿಸುವ ಸೇವಾಕರ್ತರು ಪಾಲ್ಗೊಂಡು ಸೇವೆ ಸಲ್ಲಿಸಲು ಅವಕಾಶವಿದೆ. ಪೂಜಾ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಜರುಗುವುದು. ಪೂಜಾ ಕರ್ತೃಗಳು ಟ್ರಸ್ಟಿನ ಕಾರ್ಯಾಲಯದಲ್ಲಿ ಅಧಿಕೃತ ರಸೀದಿ ಪಡೆದುಕೊಂಡು ಸೇವೆ ಸಲ್ಲಿಸಬಹುದೆಂದು ಸ್ಪಷ್ಟಪಡಿಸಿದರು. 

 ಈ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ.ವೀರಭದ್ರಪ್ಪ, ಕಾರ್ಯದರ್ಶಿ ಹೆಚ್.ವಿ.ಸುರೇಶ, ಖಜಾಂಚಿ ಎಸ್.ಎಂ.ರಾಜು, ಸಹ ಖಜಾಂಚಿ ಎಂ.ಕಾAತರಾಜು ಸಂಚಾಲಕ ಬಿ.ಎಂ.ಗುರುಮೂರ್ತಿ ಮೊದಲ್ಗೊಂಡು ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.