ಶ್ರಾವಣ ನಿಮಿತ್ಯ ಜು. 29ರಂದು ಹಿರೇಸಾವಳಗಿ ಶ್ರೀ ಶಿವಲಿಂಗೇಶ್ವರ್ ಮಹಾಪುರಾಣ ಪ್ರಾರಂಭೋತ್ಸವ

ಕಲಬುರಗಿ,ಜು.26: ಈ ವರ್ಷದ ಶ್ರಾವಣ ಮಾಸದ ಅಂಗವಾಗಿ ನಗರದ ವಿಮಾನ ನಿಲ್ದಾಣರಸ್ತೆ ಬಸವೇಶ್ವರ್ ಆಸ್ಪತ್ರೆ ಎದುರುಗಡೆಯಲ್ಲಿನ ವಿದ್ಯಾನಗರ್ ಕಾಲೋನಿಯ ವೆಲ್‍ಫೇರ್ ಸೊಸೈಟಿಯ ಸಮುದಾಯ ಭವನದಲಿ ್ಲಹಿರೇಸಾವಳಗಿಯ ಶ್ರೀ ಶಿವಲಿಂಗೇಶ್ವರ್ ಮಹಾ ಪುರಾಣಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾನಗರದ ವೆಲ್‍ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ್ ಅಂಡಗಿ ಅವರು ತಿಳಿಸಿದ್ದಾರೆ.
ತಾಲ್ಲೂಕಿನ ಹಿರೇಸಾವಳಗಿ ಜಗದ್ಗುರು ಶಿವಲಿಂಗೇಶ್ವರ್ ಸಂಸ್ಥಾನ ಮಠದ ಗುರುನಾಥ್ ಮಹಾಸ್ವಾಮಿಗಳು ಪುರಾಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕ್ರೆಡೆಲ್ ಅಧ್ಯಕ್ಷ ಚಂದು ಬಿ. ಪಾಟೀಲ್ ಅವರು ಪುರಾಣ ಕಾರ್ಯಕ್ರಮ ಉದ್ಘಾಟಿಸುವರು. ಎಂ.ಬಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಚಂದ್ರಶೇಖರ್ ತಿಗಡಿ ಅವರು ಮುಖ್ಯ ಅತಿಥಿಗಳಾಗಿ ಹಾಗೂ ವಾರ್ಡ್ ನಂ. 45ರ ಮಹಾನಗರ ಪಾಲಿಕೆಯ ಸದಸ್ಯೆ ಶ್ರೀಮತಿ ಯಂಕಮ್ಮ ಜಗದೀಶ್ ಗುತ್ತೇದಾರ್ ಅವರು ಅತಿಥಿಗಳಾಗಿ ಆಗಮಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಹಾರಾಜಪೇಟ್‍ದ ಪ್ರಭಯ್ಯ ಶಾಸ್ತ್ರೀಗಳು ಹಿರೇಮಠ್ ಅವರಿಂದ ಪುರಾಣ ಪ್ರವಚನ ನಡೆಯಲಿದೆ, ಸಿರಗುಪ್ಪ ತಾಲ್ಲೂಕಿನ ಹಳೆಕೋಟೆಯ ಪಂಪಾಪತಿ ಗವಾಯಿಗಳಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಸ್ಥಳೀಯ ಖ್ಯಾತ ಕಲಾವಿದ ಶಂಭುಲಿಂಗ್ ಪಾಟೀಲ್ ದುಧನಿ ಅವರು ತಬಲಾ ಸಾಥ್ ನೀಡಲಿದ್ದಾರೆ. ಸೊಸೈಟಿ ಅಧ್ಯಕ್ಷ ಮಲ್ಲಿನಾಥ್ ದೇಶಮುಖ್ ಅವರು ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.