ಶ್ರಾವಣ ನಿಮಿತ್ತ ಒಂದು ತಿಂಗಳ ಪ್ರವಚನ ಮಾಲಿಕೆ

ಔರಾದ : ಜು.26:ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಉದ್ಭವಲಿಂಗ ಅಮರೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಶ್ರೀ ಶರಣಬಸವೇಶ್ವರ ಚರಿತ್ರೆಯ ಪ್ರವಚನ ನಡೆಯಲಿದೆ ಎಂದು ಶ್ರೀ ಅಮರೇಶ್ವರ ಮತ್ತು ಆಂಜನೇಯ ದೇವಸ್ಥಾನ ಕಮಿಟಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ ಅವರು ತಿಳಿಸಿದ್ದಾರೆ.

ಈ ಪ್ರವಚನ ಕಾರ್ಯಕ್ರಮವನ್ನು ಪ್ರವಚನಕಾರರಾದ ಕುಮಾರ ಶ್ರೀ ಪ್ರಶಸ್ತಿ ಪುರಸ್ಕøತರಾದ. ಶ್ರೀ.ವೇ.ಮೂ. ಗುರುಪಾದಯ್ಯ ಶಾಸ್ತ್ರಿಗಳು ಹಿರೇಮಠ ಹಾನಗಲ್ ಅವರು ನಡೆಸಿಕೊಡಲಿದ್ದಾರೆ.

ಪರವಚನವು ಜು. 29 ರಿಂದ ಒಂದು ತಿಂಗಳ ಕಾಲ ಸಾಯಂಕಾಲ 6:30 ರಿಂದ 08:00 ಗಂಟೆಯವರೆಗೆ ನಡೆಯಲಿದೆ ಎಂದು ತಿಳಿಸಿದರು.