
(ಸಂಜೆವಾಣಿ ವಾರ್ತೆ)
ಔರಾದ :ಆ.20: ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಉದ್ಭವಲಿಂಗ ಅಮರೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಶ್ರೀ ಅಜಾತ ನವಲಗುಂದ ನಾಗಲಿಂಗ ಸ್ವಾಮಿಗಳ ಮಹಾ ಪುರಾಣ ಪ್ರವಚನ ನಡೆಯಲಿದೆ ಡಾ. ಶಂಕರರಾವ ದೇಶಮುಖ ಅವರು ತಿಳಿಸಿದ್ದಾರೆ.
ಈ ಪ್ರವಚನ ಕಾರ್ಯಕ್ರಮವನ್ನು ಲಿಂ.ಡಾ.ಪಂ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಶ್ರೀ.ವೇ.ಮೂ. ಗುರುಪಾದಯ್ಯ ಶಾಸ್ತ್ರಿಗಳು ಹಿರೇಮಠ ಎಲಿವಾಳ, ಹಾನಗಲ್ ಅವರು ನಡೆಸಿಕೊಡಲಿದ್ದಾರೆ.
ಪರವಚನವು ಅ.17 ರಿಂದ ಸೇ.16ರ ವರೆಗೆ ಒಂದು ತಿಂಗಳ ಕಾಲ ಸಾಯಂಕಾಲ 6:30 ರಿಂದ 08:00 ಗಂಟೆಯವರೆಗೆ ನಡೆಯಲಿದೆ, ಸದ್ಭಕ್ತಾದಿಗಳು ದಿನಾಲು ಪ್ರವಚನ ಆಲಿಸಿ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗೋ ರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಜ ಅಲ್ಮಾಜೆ, ದೇವಸ್ಥಾನ ಕಮಿಟಿ ಸದಸ್ಯರಾದ ಬಸವರಾಜ ಚ್ಯಾರೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.