ಶ್ರಾವಣ ತಿಂಗಳ: ಚಕ್ರ ಭಜನೆ ಆರಂಭ

ಬೀದರ್:ಜು.31: ತಾಲೂಕಿನ ಬಾವಗಿ :ಶ್ರಾವಣ ಮಾಸದ ಆರಂಭ ಹಿನ್ನೆಲೆ ತಾಲೂಕಿನ ಬಾವಗಿ ಗ್ರಾಮದ ಪವಾಡ ಪುರುಷ ಶ್ರೀ ಗುರು ಭದ್ರೇಶ್ವರ ಸ್ವಾಮಿಯು ದೇವಾಲಯದಲ್ಲಿ ರುದ್ರಭಿಷೇಕ ಪೂಜೆ, ಬಿಲ್ವಾರ್ಚನೆ ಮತ್ತು ಗ್ರಾಮಸ್ಥರಿಂದ ನಿರಂತರ ಚಕ್ರ ಭಜನೆ ಆರಂಭವಾಗಿದೆ.

ಪವಿತ್ರ ತಿಂಗಳ ಪ್ರಯುಕ್ತ ಹಮ್ಮಿಕೊಂಡ ನಿರಂತರ ಚಕ್ತಿ ಭಜನೆಯನ್ನು ಪ್ರತಿದಿನ ರಾತ್ರಿ 9 ರಿಂದ 11 ರವರೆಗೆ ನಡೆಯುತ್ತಿದೆ. ಭಜನೆ ನೋಡಲು ಸುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ನೋಡಲು ಆಗಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷತೆ ಯಾಗಿದೆ

ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರುಶನ ಪಡೆಯಬೇಕು ಎಂದು ಭದ್ರೇಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಪ್ರಕಟಣೆ ಯಲಿ ತಿಳಿಸಿದ್ದಾರೆ

ಚಕ್ರ ಭಜನೆಯ ಯಲ್ಲಿ ಶಾಂತಯ್ಯ ಸ್ವಾಮಿ, ಭದ್ರಯ್ಯಸ್ವಾಮಿ, ರಾಜಕುಮಾರ್ ಸ್ವಾಮಿ ಶಿವಕುಮಾರ ಸ್ವಾಮೀ ಗುಂಡಯ್ಯ ಸ್ವಾಮಿ, ಕಲ್ಲಪ್ಪ ಬೊಮ್ಮಣಿ ಸಾಯಿಕುಮಾರ್ ಭದ್ರಣ ವಿಶ್ವ ಪೃಥ್ವಿರಾಜ್ ಹಜ್ಜರಗಿ ರೇವಣಪ್ಪ ಭದ್ರಣ ನರಸಯ್ಯ ದಿಲೀಪ್ ಚಿದ್ರಿ ವಿಜಯಕುಮಾರ್ ಬಾಪುರ್ ಭೀಮಣ್ಣ ಇತರರು ಇದ್ದರು