ಶ್ರಾವಣ ಕೊನೆ ಸೋಮವಾರ ಶ್ರೀಶೈಲ್‍ದಲ್ಲಿ ಪೂಜೆ ಸಲ್ಲಿಸಿದ ಸಚಿವ ಖೂಬಾ

ಬೀದರ:ಸೆ.12:ಶ್ರಾವಣ ಮಾಸದ ಕೊನೆಯ ಸೊಮವಾರವಾದ ನಿಮಿತ್ಯ, ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಹಾಗೂ ಕುಟುಂಬಸ್ಥರು ಶ್ರೀಶೈಲಕ್ಕೆ ತೆರಳಿ, ಶ್ರೀ ಮಲ್ಲಿಕಾರ್ಜುನ ದೇವರ ಪೂಜೆಯನ್ನು ನೆರವೆರಿಸಿ ದರ್ಶನ ಪಡೆದುಕೊಂಡರು.

ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಬೇಕು, ಸರ್ವರು ಸುಖ, ಶಾಂತಿ ನೆಮ್ಮದಿಯಿಂದ ಬದುಕಬೇಕು, ಎಲ್ಲಾ ಜನತೆ ಸಹೋದರತೆಯಿಂದ ಬಾಳಿ ಬದುಕಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ಇದೇ ಸಂಧರ್ಭದಲ್ಲಿ ಭಾರತದ ಆಧ್ಯಾತ್ಮಿಕ ಸಂಸ್ಕøತಿಗೆ ಮಹತ್ತರ ಸೇವೆ ನೀಡುತ್ತಿರುವ ಶ್ರೀಶೈಲ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿ ದರ್ಶನಾಶೀರ್ವಾದವು ಪಡೆದುಕೊಂಡರು.

ಪಂಚಪೀಠಗಳಾದ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀಶೈಲ, ಶ್ರೀ ಕಾಶಿ ಪೀಠಗಳ ದರ್ಶನ ಶ್ರಾವಣ ಮಾಸದಲ್ಲಿ ಅತೀ ಪುಣ್ಯಕರವಾದದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಂದು ಬಾರಿಯಾದರು ಐದು ಪೀಠಗಳ ದರ್ಶನ ಮಾಡಿಕೊಳ್ಳಬೇಕು, ಯಾಕೆಂದರೆ ನಮ್ಮೇಲ್ಲರನ್ನು ಧರ್ಮ ಮಾರ್ಗದಲ್ಲಿ ಸಾಗುವಂತೆ ಸದಾಕಾಲ ಮಾರ್ಗದರ್ಶನ ಮಾಡುತ್ತಿರುವ ಪೀಠಗಳು ಇವುಗಳು. ನಮ್ಮ ಸಂಸ್ಕøತಿ ಮತ್ತು ಪರಂಪರೆಯ ಕುರಿತು ಜಗತ್ತಿಗೆ ಸದಾಕಾಲ ತಿಳಿಸುತ್ತಿರುವ ಎಲ್ಲಾ ಪಂಚಪಿಠಾಧಿಪತಿಗಳಿಗೆ ನಾವೇಲ್ಲರೂ ಚಿರಋಣಿಯಾಗಿರಬೇಕು ಹಾಗೂ ಪೂಜ್ಯರು ತೊರಿದ ಮಾರ್ಗದಲ್ಲಿ ನಡೆದುಕೊಳ್ಳುವುದು ರೂಢಿಸಿಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಜನತೆಯಲ್ಲಿ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಂತರ ಶ್ರೀಶೈಲದಲ್ಲಿರುವ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠಕ್ಕೆ ತೆರಳಿ, ಮಹಾತಪಸ್ವಿ ಪರಮಪೂಜ್ಯ ಶ್ರೀ ಶ್ರಿ ಕರುಣಾದೇವಿ ಮಾತಾ ಅಧಿಪತಿಗಳರವರ ದರ್ಶನಾಶಿರ್ವಾದ ಪಡೆದುಕೊಂಡು, ಮಹಾಶರಣೆ ಹೆಮರೆಡ್ಡಿ ಮಲ್ಲಮ್ಮ ಹಾಗೂ ಶ್ರೀ ಸಾಕ್ಷಿ ಗಣಪತಿಯ ದರ್ಶನ ಪಡೆದುಕೊಂಡರು.