ಶ್ರಾವಣ ಎಂದರೆ ಮನಸ್ಸು, ದೇಹದಲ್ಲಿ ಹೊಸತನ

ಸಂಜೆವಾಣಿ ವಾರ್ತೆಸಂಡೂರು:ಅ: 20: ಶ್ರಾವಣಮಾಸ ದಲ್ಲಿ ಬಹಳಷ್ಟು ಜನರು ವಿಶೇಷ ಉರುಪಿನಿಂದ ಹಬ್ಬ ಆಚರಿಸುತ್ತೇವೆ, ಅದಕ್ಕೆ ಪ್ರಕೃತಿಯ ವರವೆಂದರೆ ತಪ್ಪಾಗಲಾರದು, ಕಾರಣ ಇಡೀ ವಾತಾವರಣ ಹಸಿರಿನಿಂದ ಕಂಗೊಳ್ಳಿಸಿ ಆಮ್ಲಜನಕ ಹೆಚ್ಚು ನೀಡಿ ಜನರಲ್ಲಿ ಉತ್ಸಾಹ ತುಂಬುತ್ತದೆ, ಅದರಿಂದ ಪ್ರತಿಯೊಬ್ಬರೂ ಸಹ ಹಬ್ಬ ಆಚರಿಸುತ್ತೇವೆ, ಪರಿಸರದ ಮಡಿಲಲ್ಲಿಯ ಶ್ರೀ ಗಂಡಿಬಸವೇಶ್ವರ ಸ್ವಾಮಿಯ ವಿಶೇಷ ಅಭಿಷೇಕ ನಡೆಸುವುದರ ಜೊತೆಗೆ ಜನಪದ ಕಲೆಯಾದ ವೀರಗಾಸೆಯ ಪ್ರದರ್ಶನ ಮೆಚ್ಚುವಂತಹದ್ದು ಕಾರಣ ಹಬ್ಬದ ಜೊತೆಗೆ ಕಲೆ ಉಳಿಸುವ ಕಾರ್ಯವಾಗುತ್ತಿದೆ ಇಂತಹ ಹಬ್ಬಗಳು ನಮ್ಮ ವೈಭವವನ್ನು ಸಾರುತ್ತವೆ ಎಂದು ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಮಹಾಸ್ವಾಮಿಗಳು ತಿಳಿಸಿದರು.ಅವರು ತಾಲೂಕಿನ ತಾರಾನಗರ  ಸಂಡೂರು ಮದ್ಯದಲ್ಲಿ ನಾರಿಹಳ್ಳ ದಡದಲ್ಲಿಯ ಶ್ರೀ ಗಂಡಿಬಸವೇಶ್ವರ ಸ್ವಾಮಿಯ ವಿಶೇಷ ಕುಂಭ ಅಭೀಷಕ, ಮೆರವಣಿಗೆ, ವೀರಗಾಸೆಯ ಪ್ರದರ್ಶನ ನಡೆಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದ ಭಕ್ತರಿಗೆ ಶುಭಕೋರಿದರು.ಈ ಸಂದರ್ಭದಲ್ಲಿ ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಅಶೀರ್ವಜನ ನೀಡಿ ಸಂಡೂರು ಪ್ರಕೃತಿಯ ಸೌಂದರ್ಯವನ್ನು ಹೊತ್ತು ನಿಂತಿದೆ, ನೋಡುಗರನ್ನು ಸೆಳೆಯುತ್ತಿದೆ, ಭಕ್ತರು ಭಕ್ತಿಯ ಸಮರ್ಪಿಸಲು ಇದು ಸೂಕ್ತ ಕಾಲವಾಗಿದ್ದು ಗಂಡಿಬಸವೇಶ್ವರ ಸ್ವಾಮಿಯ ಪೂಜಾಕಾರ್ಯದಲ್ಲಿ ಭಾಗಿಯಾದ ಎಲ್ಲಾ ಭಕ್ತರಿಗೆ ಸನ್ಮಂಗಳ ಉಂಟಾಗಲಿ ಎಂದು ಶುಭಕೋರಿದರು.ಈ ಸಂದರ್ಭದಲ್ಲಿ ಸಂಡೂರು, ಲಕ್ಷ್ಮೀಪುರ, ಧರ್ಮಾಪುರ, ತಾರಾನಗರ, ಮುರಾರಿಪುರ ಇತರ ಗ್ರಾಮಗಳ ಸಾವಿರಾರು ಭಕ್ತರು ಅಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು, ಅರ್ಚಕರಾದ ವೀರಯ್ಯಸ್ವಾಮಿಗಳು ಬೆಳಗಿನಿಂದಲೇ ವಿಶೇಷ ಪೂಜಾಕಾರ್ಯಕ್ರಮಗಳನ್ನು ನೆರವೇರಿಸಿದರು. 
One attachment • Scanned by Gmail