ಶ್ರಾವಣಮಾಸ : ೨೧.೬೦ ಲಕ್ಷ ಹನುಮಾನ ಚಾಲೀಸ್ ಜಪ

ರಾಯಚೂರು.ಜು.೨೮- ನಗರದ ಶ್ರೀ ವರಸಿದ್ಧಿ ಆಂಜಿನೇಯ್ಯ ದೇವಸ್ಥಾನದಲ್ಲಿ ಹನುಮಾನ ಚಾಲೀಸ್ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ ಎಂದು ದೇವಸ್ಥಾನ ಅಧ್ಯಕ್ಷರಾದ ರಾಜಾ ಶಂಕರ ವಕೀಲರು ತಿಳಿಸಿದರು.
ಅವರಿಂದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶ್ರೀ ವರಸಿದ್ಧಿ ಆಂಜಿನೇಯ್ಯ ಸ್ವಾಮಿ ದೇವಸ್ಥಾನ ಮತ್ತು ಶ್ರೀಹರಿ ಭಜನೆ ಮಂಡಳಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆಸ್ಥಾನ ಪಂಡಿತರಾದ ಕಿನ್ನಾಳ್ ನಾರಾಯಣಾಚಾರ್ ಅವರು ಉದ್ಘಾಟಿಸಲಿದ್ದಾರೆ. ಜು..೩೦ ರಿಂದ ಪ್ರತಿ ಶನಿವಾರ ಶ್ರೀ ವರಸಿದ್ಧಿ ಆಂಜಿನೇಯ್ಯ ಸ್ವಾಮಿಗಳ ದೇವಸ್ಥಾನದಲ್ಲಿ ಹನುಮಾನ ಚಾಲೀಸ್ ಸಪ್ತಾಹ ನಡೆಸಲಾಗುತ್ತದೆಂದು ಹೇಳಿದರು.
ಕಾಂತಾಚಾರ್ಯರು ಮಾತನಾಡುತ್ತಾ, ೨೧,೬೦೦ ಸಾರಿ ಶ್ವಾಸ ಜಪ ಮಾಡಿ, ನಮ್ಮ ಬದುಕಿಗೆ ಶಕ್ತಿಯಾಗಿದೆಂದು ಶಾಸ್ತ್ರಗಳು ತಿಳಿಸುತ್ತವೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಮತ್ತು ಭಕ್ತಿ ಜ್ಞಾನವನ್ನು ದಯಪಾಲಿಸಲು ೨೧ ಲಕ್ಷ ೬೦ ಸಾವಿರ ಹನುಮಾನ ಚಾಲೀಸ್ ಸಪ್ತಾಹ ಕಾರ್ಯಕ್ರಮದ ಮೂಲಕ ಶ್ರಾವಣಮಾಸ ನಿರ್ವಹಿಸಲಾಗುತ್ತಿದೆ. ಶ್ರಾವಣದ ಪ್ರತಿ ಶನಿವಾರ ವರಸಿದ್ದಿ ಆಂಜಿನೇಯ್ಯ ದೇವಸ್ಥಾನದಲ್ಲಿ ಹನುಮಾನ ಚಾಲೀಸ್ ನಡೆಯಲಿದೆ. ಸಮಯ ಸಿಕ್ಕಾಗ ಹನುಮಾನ ಚಾಲೀಸ್ ಜಪ ಮಾಡಿ, ಇದನ್ನು ತಮ್ಮ ಗಮನಕ್ಕೆ ತರುವಂತೆ ಕೋರಲಾಗಿದೆ. ಆಗಸ್ಟ್ ೨೭ ರಂದು ಹನುಮಾನ ಚಾಲೀಸ್ ಶ್ಲೋಕದ ಶಕ್ತಿ ಪ್ರದಾನ ಯಜ್ಞ ಮೂಲಕ ಮುಕ್ತಾಯಗೊಳಿಸಲಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೂಪಾದೇವಿ, ಶಾಂತಯ್ಯ ಸ್ವಾಮಿ, ಮಾರೆಪ್ಪ ಅವರು ಉಪಸ್ಥಿತರಿದ್ದರು.