
ಕಲಬುರಗಿ:ಸೆ.4:ಶ್ರಾವಣ ಅಧಿಕ ಮಾಸದಲ್ಲಿ ಜಿಲ್ಲಾ ಕುರಹಿನಿಶೆಟ್ಟಿ ಸಮಾಜದ ವತಿಯಿಂದ ಕುಲದೇವರು ಆದ ಶ್ರೀ ನೀಲಕಂಠೇಶ್ವರ ವಿಶೇಷ ಪೂಜೆ ಕಾರ್ಯಕ್ರಮ ಜರುಗಿತು, ರವಿವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ರವರೆಗೆ ಗುರು ಮಠ ದಲ್ಲಿ ಪ್ರತಿ ವರ್ಷದ ಕ್ಕಿಂತ ಭಿನ್ನವಾಗಿ ಆಚರಿಸಲಾಯಿತು.
ಗದ್ದುಗೆ ಮಠದ ಗುರು ಶ್ರೀ ಚರಲಿಂಗ ಸ್ವಾಮಿಗಳು + ಬ್ರಹ್ಮನಮಠದ ಶ್ರೀ ಶಿವಾನಂದ ಸ್ವಾಮಿಗಳ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು, ಮೊದಲು ಶ್ರೀ ನೀಲಕಂಠೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ನಂತರ ಸಮಾಜದ ಅಭಿವೃದ್ಧಿಗೆ ಸಹಕರಿಸಿದ ಸಮಾಜ ಭಾಂದವರಿಗೆ ಸನ್ಮಾನಿಸಲಾಯಿತು ಮತ್ತು ನಿವೃತ್ತಿ ಹೊಂದಿದ ಹಿರಿಯರನ್ನು ಕೂಡಾ ಗೌರವಿಸಲಾಯಿತು. ಶ್ರೀ ವೀರೇಂದ್ರ ಜವಾಜಿ, ಶ್ರೀ ವಿನಾಯಕ, ಡಾ. ಬಸವರಾಜ ಕೋಟಿ, ನ್ಯಾಯವಾದಿ ನಿತ್ಯಾನಂದ ಭಂಡಿ ಹಾಗೂ ದೇವಪ್ಪ ಬಿಳಿಜಾಡರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಮಾಜದ ನೂತನ ಅಧ್ಯಕ್ಷ ಬಸವರಾಜ ಕರದಳ್ಳಿ ವಹಿಸಿದ್ದರು, ಉಪಾಧ್ಯಕ್ಷ ಕುಶಾಲ ಯಡವಳ್ಳಿ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ಸ್ವಾಗತಿಸಿದರು, ಖಜಾಂಚಿ ಕುಂಟೋಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಪ್ತ ನೇಕಾರ ಸಂಘದ ಅಧ್ಯಕ್ಷ ಶ್ರೀ ಶಿವಲಿಂಗ್ಗಪ್ಪ ಅಷ್ಟಗಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿವರಾಜ್ ಸತಂಪೆಟ್, ಜಿಲ್ಲಾ ಅಧ್ಯಕ್ಷ ಶ್ರೀ ಬಾಬುರಾವ್ ಯದ್ರಾಮಿ, ಕಾರ್ಯದರ್ಶಿ ಶ್ರೀ ಸಂಗಮ ನಾಥ ರೇವತ ಗೌವ ಇತರರು ಪಾಲ್ಗೊಂಡಿದ್ದರು.