‘ಶ್ರವ್ಯ-ದೃಶ್ಯ’ದಿಂದ ಕೋವಿಡ್ ಜಾಗೃತಿ

ಬಳ್ಳಾರಿ,ನ.17: ಆಧುನಿಕ ತಂತ್ರಜ್ಞಾನದ ಬೃಹತ್ ಎಲ್‍ಇಡಿ ಪರದೆ ಬಳಸಿ ವಾಹನಗಳ ಮೂಲಕ ಜಿಲ್ಲೆಯ ಆಯ್ದ 180 ಹಳ್ಳಿಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಕೋವಿಡ್-19 ವೈರಾಣು ತಡೆಗೆ ಶ್ರವ್ಯ-ದೃಶ್ಯದ ಮೂಲಕ ಜಾಗೃತಿ ಮುನ್ನಚ್ಚೆರಿಕೆ ಕಾರ್ಯಕ್ರಮದ ಎಲ್‍ಇಡಿ ವಿಶೇಷ ಪ್ರಚಾರ ವಾಹನಕ್ಕೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಸೋಮವಾರ ಚಾಲನೆ ನೀಡಿದರು.
ಚಾಲನೆ ನೀಡಿದ ನಂತರ ಎಲ್‍ಇಡಿ ಪರದೆಯಲ್ಲಿ ಮೂಡಿದ ಶ್ರವ್ಯ-ದೃಶ್ಯದ ಮುನ್ನಚ್ಚೆರಿಕಾ ಕ್ರಮಗಳನ್ನು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ. ಮಹಾಮಾರಿ ಕೊರೊನಾ ತಡೆಗಟ್ಟುವಲ್ಲಿ ಜನತೆ ಕೈಗೊಳ್ಳಬೇಕಾದ ಸುರಕ್ಷತಾ/ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್‍ಇಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳನ್ನು ಬಳಸಿಕೊಂಡು ಸರಕಾರ ವಿಶೇó ಪ್ರಚಾರ ಕಾರ್ಯ ಕೈಗೊಂಡಿದೆ ಈ ಎಲ್‍ಇಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳು ಕೋವಿಡ್ ಮುನ್ನೆಚ್ಚರಿಕಾ ಸಂದೇಶಗಳ ಕುರಿತು ಜಾಗೃತಿಯನ್ನು ಜಿಲ್ಲೆಯ ಜನರಲ್ಲಿ ಪರಿಣಾಮಕಾರಿಯಾಗಿ ಮೂಡಿಸಲಿ. ಕೋವಿಡ್ ಕುರಿತು ಜನರು ಹೆಚ್ಚು ಜಾಗೃತಿ ವಹಿಸಬೇಕು. ಚಳಿಗಾಲದ ಸಂದರ್ಭದಲ್ಲಿ ಕೋವಿಡ್ ವೈರಾಣು ಹೆಚ್ಚು ಅಪಾಯಕಾರಿಯಾಗಿದ್ದು,ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಅಂತರ ಕಾಯ್ದುಕೊಳ್ಳಬೇಕು ಮತ್ತು ಕಾಲಕಾಲಕ್ಕೆ ಕೈತೊಳೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಈ ವಿಶೇಷಪ್ರಚಾರ ಕಾರ್ಯವು ಜಿಲ್ಲೆಯಲ್ಲಿ 10 ದಿನಗಳ ಕಾಲ ನಡೆಯಲಿದ್ದು, ಎಲ್‍ಇಡಿ ಪರದೆ ಹೊಂದಿರುವ ಎರಡು ಮೊಬೈಲ್ ವಾಹನಗಳು ಮೊದಲ ಹಂತದಲ್ಲಿ ಆಯ್ದ 180 ಹಳ್ಳಿಗಳಲ್ಲಿ ಪ್ರತಿದಿನ 10 ಹಳ್ಳಿಗಳಂತೆ ಸಂಚರಿಸಿ ಜನರಿಗೆ ಕೋವಿಡ್ ಕುರಿತು ಅರಿವು ಮೂಡಿಸಲಿವೆ. ನಂತರ ಎರಡನೇ ಹಂತದಲ್ಲಿ ಉಳಿದ ಹಳ್ಳಿಗಳಲ್ಲಿ ವಾಹನಗಳು ಸಂಚರಿಸಿ ಅರಿವು ಮೂಡಿಸಲಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‍ಸಿಎಚ್ ಅಧಿಕಾರಿ ಡಾ.ಅನಿಲಕುಮಾರ್, ಆದಿತ್ಯ ಈವೆಂಟ್ಸ್ ಸಂಸ್ಥೆಯ ಪ್ರಮುಖರಾದ ಮಂಜುನಾಥ ಬಸರೂರು,ದೀಪಕ್,ವಿ.ಹನುಮಂತು ಮತ್ತಿತರರು ಇದ್ದರು.