ಶ್ರವಣಬೆಳಗೊಳ ಶ್ರೀಗಳ ನಿಧನಕ್ಕೆ ಸವದಿ ಸಂತಾಪ

ಅಥಣಿ ; ಮಾ.23:ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆಗೆ ಮಾಜಿ ಡಿಸಿಎಂ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ,
ಅವರ ನಿಸ್ವಾರ್ಥ ಸೇವೆ ದೇಶಕ್ಕೆ ಮಾದರಿ.
ಅವರು ಇಹಲೋಕ ತ್ಯಜಿಸಿದ್ದಾರೆ ಎಂಬುದು ಆಘಾತಕಾರಿ.ಭಕ್ತರೊಂದಕ್ಕೆ ತುಂಬಲಾರದ ಹಾನಿ ಸಂಭವಿಸಿದೆ.ಕರ್ಮಯೋಗಿ ಎಂದು ಬಿರುದನ್ನು ಪಡೆದ ಪರಮ ಪೂಜ್ಯರು.ಜೈನ ಧರ್ಮವನ್ನು ಅತಿ ನಿಷ್ಠಾವಂತದಿಂದ ಪಾಲನೆ ಮಾಡುತಿದ್ದರು.
ಕರ್ನಾಟದಲ್ಲಿ ಜೈನ ಧರ್ಮದ ಬಗ್ಗೆ ಭೋದನೆ ಮಾಡುತಿದ್ದರು. ಅಂತಹ ಕರ್ಮಯೋಗಿಯನ್ನು ಕಳೆದುಕೊಂಡು ಜೈನ ಧರ್ಮಕ್ಕೆ ತುಂಬಲಾರದ ಹಾನಿ ಸಂಭವಿಸಿದೆ.ನಮಗೆ ಎಲ್ಲರಿಗೂ ಬಹಳ ದುಃಖವಾಗಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ.