ಶ್ರಮ ವಹಿಸಿ ಕರ್ತವ್ಯ ನಿರ್ವಹಿಸುವಂತೆ ವೈದ್ಯರಲ್ಲಿ ಸಂಸದರ ಮನವಿ

ದಾವಣಗೆರೆ ಮೇ.೪: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಸುಗಮ ಆಕ್ಸಿಜನ್ ಪೂರೈಕೆ, ಬೆಡ್ ವ್ಯವಸ್ಥೆ ಮತ್ತು ಔಷಧೋಪಚಾರದ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಧಿಕಾರಿಗಳು, ಎಸ್‌ಪಿ ಹಾಗೂ ವೈದ್ಯರೊಂದಿಗೆ ಸಿ.ಜಿ ಆಸ್ಪತ್ರೆಯಲ್ಲಿ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ ಸಭೆ ನಡೆಸಿದರು. ಸಭೆಯಲ್ಲಿ ಅವರು ಮಾತನಾಡಿ, ಕಳೆದ ಬಾರಿಗಿಂತ ಕೋವಿಡ್ 2ನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಎದುರಿಸಲು ಎಲ್ಲ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ವೈದ್ಯರಿಗೆ ಸೂಚನೆ ನೀಡಿದ ಅವರು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ವೈದ್ಯರು ಶ್ರಮ ವಹಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಭಾನುವಾರ 317 ಪಾಸಿಟಿವ್ ಕೇಸ್ ಬಂದಿದ್ದು, 02 ಮರಣ ಸಂಭವಿಸಿದೆ. 2148 ಸಕ್ರಿಯ ಪ್ರಕರಣಗಳಿವೆ. ಇಂದು 8 ರಿಂದ 10 ಸಾವಿರ ವಯಲ್ಸ್ ಕೋವಿಡ್ ಲಸಿಕೆ ಜಿಲ್ಲೆಗೆ ಸರಬರಾಜಾಗುತ್ತಿದ್ದು ನಾಳೆಯಿಂದ ಲಸಿಕೆ ಆರಂಭಿಸಬಹುದು ಎಂದರು.  ಕೋವಿಡ್ ಪತ್ತೆ ಹಚ್ಚಲು ಸಿಟಿ ಸ್ಕಾö್ಯನ್ ಮಾಡಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಟಿ ಸ್ಕಾö್ಯನ್ ಕೇಂದ್ರದವರು ಸರ್ಕಾರ ನಿಗದಿಪಡಿಸಿಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ. ಇಂತಹ ತುರ್ತು ಪರಿಸ್ಥತಿಯಲ್ಲಿ ವೈದ್ಯರು ಹೀಗೆ ಜನರಿಂದ ಹೆಚ್ಚು ದರ ಪಡೆಯಬಾರದು. ನಿಗದಿತ ದರವನ್ನು ಬೋರ್ಡಿನಲ್ಲಿ ಹಾಕಬೇಕು. ಒಂದು ಪಕ್ಷ ಆ ದರಕ್ಕಿಂತ ಹೆಚ್ಚಿಗೆ ಪಡೆದರೆ ರೋಗಿಗಳಯ ಹೆಲ್ಪ್ಲೈನ್‌ಗೆ ಕರೆ ಮಾಡಿ ತಿಳಿಸಬೇಕೆಂದರು. ಹಾಗೂ ಸ್ಕಾö್ಯನರ್ ಬಳಕೆ ಆದ ನಂತರ ಸ್ಯಾನಿಟೈಸ್ ಮಾಡಿ ಮತ್ತೆ ಬಳಸಬೇಕು ಎಂದ ಅವರು ಜಿಲ್ಲಾಧಿಕಾರಿಗಳಿಗೆ ಸಿಟಿ ಸ್ಕಾö್ಯನ್‌ಗೆ ಹೆಚ್ಚು ಹಣ ಪಡೆಯುವವರು ಹಾಗೂ ರೆಮಿಡಿಸಿವರ್ ಅಗತ್ಯವಿಲ್ಲದಿದ್ದರೂ ಈ ಲಸಿಕೆ ನೀಡುವುದನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ಪ್ರಸ್ತುತ ಸದರನ್ ಗ್ಯಾಸ್ ಏಜೆನ್ಸಿಯವರು ಜಿಲ್ಲಾಸ್ಪತ್ರೆಗೆ 18.5 ಕೆ.ಎಲ್ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ. ಪ್ರಸ್ತುತ ಆಕ್ಸಿಜನ್ ಕೊರತೆ ಇಲ್ಲ. ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಿಸುತ್ತಾ ಹೋದರೆ ಆಕ್ಸಿಜನ್ ಪ್ರೆಷರ್ ಕಡಿಮೆ ಆಗಲಿದ್ದು, ಘಟಕದ ಸಾಮರ್ಥ್ಯಕ್ಕನುಗುಣವಾಗಿ ಬೆಡ್ ವ್ಯವಸ್ಥೆ ಮಾಡಲಾಗಿದೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ರೆಮಿಡಿಸಿವರ್ ದಾಸ್ತಾನು ಇದೆ ಎಂದರು. ಸಂಸದರು, ಮೆಡಿಕಲ್ ಆಕ್ಸಿಜನ್ ಪ್ಲಾಂಟ್‌ಗೆ ಹೆಚ್ಚುವರಿ ಆಕ್ಸಿಜನ್ ಪಡೆಯಲು ಹೆಚ್ಚುವರಿ ವಾಹನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು 15 ಹೆಚ್ಚುವರಿ ವೆಂಟಿಲೇಟರ್‌ಗಳ ನಿರ್ವಹಣೆಗೆ ನುರಿತ ಸಿಬ್ಬಂದಿ ನಿಯೋಜಿಸುವಂತೆ ತಿಳಿಸಿದರು. ಇದೇ ವೇಳೆ ಜಿಲ್ಲಾಸ್ಪತ್ರೆಯ ಡಾ.ಗಿರೀಶ್ ಕೋವಿಡ್ ವಾರ್ಡ್ ನಿರ್ವಹಿಸುವ ವೈದ್ಯರ ತಂಡಗಳ ಸಂಖ್ಯೆಯನ್ನು 5 ರಿಂದ 6 ಕ್ಕೆ ಹೆಚ್ಚಿಸಬೇಕಿದ್ದು, ಇದಕ್ಕೆ ಅವಶ್ಯಕ ವೈದ್ಯರನ್ನು ಮೆಡಿಕಲ್ ಕಾಲೇಜು ಮತ್ತು ಇನ್‌ಟರ್ನ್ಸ್ಗಳನ್ನು ಪಡೆಯಬಹುದೆಂದರು. ಶುಶ್ರೂಷಕರು ಮತ್ತು ಡಿ ಗ್ರೂಪ್‌ಗಳ ಅಗತ್ಯ ಸಹ ಇದ್ದು ಇವರನ್ನು ನೇಮಿಸುವಂತೆ ಶುಶ್ರೂಷಾಧಿಕಾರಿ ಮನವಿ ಮಾಡಿದರು.ಪ್ರೋತ್ಸಾಹ ಧನ : ಬಾಪೂಜಿ ಆಸ್ಪತ್ರೆಯ ಡಾ.ರವಿಯವರು ವೈದ್ಯರು, ಇನ್‌ಟರ್ನ್ಸ್ ತಮ್ಮ ಜೀವದ ಭಯ ತೊರೆದು ಹಗಲು ರಾತ್ರಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುತ್ತಿದ್ದು, ಇವರಿಗೆ ಪ್ರತಿದಿನ ರೂ.1 ಸಾವಿರದಂತೆ ಪ್ರೋತ್ಸಾಹಧನ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಮ್ಮ ಟ್ರಸ್ಟ್ ವತಿಯಿಂದ ರೂ.5 ಲಕ್ಷ ನೀಡುವುದಾಗಿ ತಿಳಿಸಿದರು.ಸಭೆಯಲ್ಲಿ ಪಾಲಿಕೆ ಮಹಾಪೌರ ವೀರೇಶ್ ಎಸ್.ಟಿ., ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್‌ನಾಯಕ್, ಡಿಹೆಚ್‌ಓ ಡಾ.ನಾಗರಾಜ್, ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಜಯಪ್ರಕಾಶ್, ಡಿಎಸ್‌ಓ ಡಾ.ರಾಘವನ್, ಡಾ.ಶಶಿಧರ್, ಡಾ.ಗಿರೀಶ್, ಡಾ.ರವಿ ಮತ್ತಿತರೆ ತಜ್ಞ ವೈದ್ಯರು ಹಾಜರಿದ್ದರು.