ಶ್ರಮಿಕ ಭವನದಲ್ಲಿ ೧೩೫ನೇ ಅಂತರಾಷ್ಟ್ರೀಯ ಮೇ ದಿನಾಚರಣೆ

ಸಿಂಧನೂರು.ಮೇ.೧-ಇಂದು ಸಿಂಧನೂರು ನಗರದ ಎಪಿಎಂಸಿಯ ಶ್ರಮಿಕ ಭವನದಲ್ಲಿ ೧೩೫ನೇ ಅಂತರಾಷ್ಟ್ರೀಯ ಮೇ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮೊದಲಿಗೆ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷರಾದ ಮಾಬುಸಾಬ ಬೆಳ್ಳಟ್ಟಿ ದ್ವಜಾರೋಹಣವನ್ನು ನೆರವೇರಿಸಿದರು. ಸಂಘದ ಎಲ್ಲಾ ಸದಸ್ಯರು ಕಾರ್ಮಿಕರ ಪರ ಘೋಷಣೆಗಳನ್ನು ಕೂಗಿದರು. ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಗೌರವಾಧ್ಯಕ್ಷರಾದ ಎಂ.ಗಂಗಾಧರ ನಂತರ ಮಾತನಾಡಿ, ಲಕ್ಷಾಂತರ ಕಾರ್ಮಿಕರ ಜೀವನ್ಮರಣದ ಮೂಲಕ ೮ ಗಂಟೆ ಅವಧಿಯ ಕೆಲಸಕ್ಕಾಗಿ, ಹೋರಾಡಿ ಕಾರ್ಮಿಕರ ರಕ್ತದಲ್ಲಿ ಅದ್ದಿ ತೆಗೆದ ತ್ಯಾಗ-ಬಲಿದಾನದ ಸಂಕೇತವೇ ಮೇ ದಿನಾಚರಣೆಯಾಗಿದೆ. ಎಂದು ಎಪಿಎಂಸಿ ಹಮಾಲರ ಸಂಘದ ಗೌರವಾಧ್ಯಕ್ಷರಾದ ಎಂ. ಗಂಗಾಧರ ಮಾತನಾಡಿದರು.
ನಗರದ ಎಪಿಎಂಸಿಯಲ್ಲಿರುವ ಶ್ರಮಿಕ ಭವನದಲ್ಲಿ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ (ಟಿಯುಸಿಐ)ದಿಂದ ಹಮ್ಮಿಕೊಂಡಿದ್ದ ಮೇ ದಿನಾಚರಣೆ ಆಚರಿಸಿ ವಿಶ್ವಕ್ರಾಂತಿ ಬಾವುಟದ ಕುರಿತು ಕ್ರಾಂತಿಗೀತೆಯನ್ನು ಹಾಡಿ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿ ಮಡಿದ ಕ್ರಾಂತಿಕಾರಿ ಅಮರವೀರರಿಗೆ ಶ್ರದ್ದಾಜಲಿ ಸಲ್ಲಿಸಿ ಮೌನಾಚರಣೆ ಮಾಡಿ, ಮಾತನಾಡಿದ ಅವರು ಕೊವಿಡ್-೧೯ ಕ್ಕೆ ಸಂಬಂಧಿಸಿ, ಸರಕಾರಗಳು ಪೂರ್ವ ಸಿದ್ಧತೆ ಇಲ್ಲದೆ, ಲಾಕ್‌ಡೌನ್, ಕರ್ಪ್ಯೂದಂತಹ ಕಠಿಣ ನಿಯಮಗಳನ್ನು ಘೋಷಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದುಡಿಯುವ ವರ್ಗದ ವಿರೋಧಿ ಸರಕಾರಗಳು ಕಾರ್ಮಿಕರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕೇವಲ ನಾಲ್ಕು ಕೋಡ್ ಬಿಲ್ಲ್‌ಗಳನ್ನಾಗಿ ಮಾಡಲಾಗಿದೆ. ಕೂಡಲೇ ಕಾರ್ಮಿಕ ತಿದ್ದುಪಡಿ ಕಾಯ್ದೆಯನ್ನು ವಾಪಸ್ಸ್ ಪಡೆಯಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಮೋದಿ-ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹೆಣಗಳ ವ್ಯಾಪಾರ ನಡೆಸಿದ್ದಾರೆ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ರಾಜ್ಯದ ಎಲ್ಲಾ ಅಸಂಘಟಿತ ಕಾರ್ಮಿಕರ ಖಾತೆಗೆ ೨೦ ಸಾವಿರ ರೂಪಾಯಿಗಳನ್ನು ಪಾವತಿಸಬೇಕು. ಹಾಗೂ ಪ್ರತಿ ತಿಂಗಳು ಕುಟುಂಬವೊಂದಕ್ಕೆ ೨೦ ಕೆಜಿ ಪಡಿತರ ದಾನ್ಯಗಳನ್ನು ಪೂರೈಸಬೇಕು. ಉಚಿತವಾಗಿ ಕೋವಿಡ್ ಲಸಿಕೆಯನ್ನು ಎಲ್ಲಾ ಜನರಿಗೆ ಹಾಕುವ ಮೂಲಕ ಕರೋನ ಮಹಾಮಾರಿಯಿಂದ ಜನರ ಪ್ರಾಣವನ್ನು ಕಾಪಾಡಬೇಕೆಂದರು.
ಸಾಮಾಜೀಕ ಅಂತರ ಕಾಯ್ದುಕೊಂಡು ನಡೆದ ಮೇ ದಿನಾಚರಣೆ ಕಾರ್ಯಕ್ರಮವನ್ನು ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಕಾರ್ಯದರ್ಶಿಯಾದ ಹೆಚ್.ಆರ್.ಹೊಸಮನಿ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನಾಗಪ್ಪ ಉಮಲೂಟಿ, ಖಜಾಂಚಿಯಾದ, ತಿಮ್ಮಣ್ಣ ಯಾದವ್, ದೌಲಸಾಬ ಮುದಗಲ್, ಮುದಿಯಪ್ಪ ಹನುಮನಗರಕ್ಯಾಂಪ್, ರಮೇಶ ಹಟ್ಟಿಕ್ಯಾಂಪ್, ರಾಜಾ ನಾಯಕ, ಜಲಾಲ್‌ಸಾಬ ಜವಳಗೇರ, ಪರುಶುರಾಮ್, ಕನಕಪ್ಪ ಪೂಜಾರಿ, ಪರಸಪ್ಪ ಪಿಡಬ್ಲ್ಯೂಡಿ ಕ್ಯಾಂಪ್, ಬಸವರಾಜ ದೇಸಾಯಿ, ಭಾಷಾಸಾಬ್, ರಮಜಾನ್‌ಸಾಬ, ಮದರ್‌ಸಾಬ ಸೇರಿದಂತೆ ಅನೇಕರು ಮೇ ದಿನಾಚರಣೆಯಲ್ಲಿ ಭಾಗವಹಿಸಿದ್ದರು.