“ಶ್ರಮಿಕ್ ಸಂಜೀವಿನಿ” ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ

ಯಾದಗಿರಿ : ಜು : 13 : ಯಾದಗಿರಿ ಕಾರ್ಮಿಕ ಇಲಾಖೆಯ “ಶ್ರಮಿಕ್ ಸಂಜೀವಿನಿ” ಸಂಚಾರಿ ಆರೋಗ್ಯ ವಾಹನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಾಹಿಲ್. ಎಸ್ ಕುನ್ನಿಭಾವಿ ಅವರು ಜುಲೈ 11ರಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

 ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾರ್ಮಿಕ ಇಲಾಖೆಯು ಕಾರ್ಮಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದುಡಿಯುವ ವರ್ಗಗಳಿಗೆ ಆರೋಗ್ಯವೇ ಭಾಗ್ಯವಾಗಿರುವಾಗ ಇಂತಹ ಯೋಜನೆಗಳು ಹೆಚ್ಚು ಪ್ರಯೋಜಕಾರಿಯಾಗಲಿವೆ ಎಂದು ಹೇಳಿದರು.
 ಯಾದಗಿರಿ ಕಾರ್ಮಿಕ ಅಧಿಕಾರಿ ಮಾಲಾಶ್ರೀ  ಮಾತನಾಡಿ ಕಾರ್ಮಿಕ ಇಲಾಖೆಯಿಂದ ಇದೊಂದು ವಿನೂತನ ಆರೋಗ್ಯ ಕಾರ್ಯಕ್ರಮವಾಗಿದ್ದು, ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿಯೇ ಅವರಿಗೆ ಆರೋಗ್ಯ ತಪಾಸಣೆ ಮಾಡುವ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಯಾದಗಿರಿ ಕಾರ್ಮಿಕ ನಿರೀಕ್ಷಕರು, ಯಾದಗಿರಿ ಬಾಲ ಕಾರ್ಮಿಕರ ಯೋಜನಾ ನಿರ್ದೇಶಕರು, ವಕೀಲರ ಸಂಘದ ಅಧ್ಯಕ್ಷರು ಪ್ರಶಾಂತ ದೇಶಮುಖ  ಹಾಗೂ ಇನ್ನಿತರರು ಉಪಸ್ಥಿತರಿದ್ದರು.