ಶ್ರಮಿಕವರ್ಗಕ್ಕೆ ವಿಶೇಷ ಪ್ಯಾಕೇಜ್ : ಅಂಬಾರಾಯ ಅಷ್ಠಗಿ ಸ್ವಾಗತ

ಕಲಬುರಗಿ ಮೇ 19: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ವತಿಯಿಂದ ಈ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮತ್ತು ರಾಜ್ಯದ ಅತ್ಯಂತ ಕಠಿಣ ಅರ್ಥಿಕ ಪರಿಸ್ಥಿತಿ ನಡುವೆಯೂ ಈ ರಾಜ್ಯದ ಶ್ರಮಿಕ ವರ್ಗದ ಜನರ ಸಹಾಯಕ್ಕೆ ವಿಶೇಷವಾಗಿ 1250 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದನ್ನು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಸ್ವಾಗತಿಸಿದ್ದಾರೆ.
ಕರ್ನಾಟಕದ ಶ್ರಮಿಕ ವರ್ಗದವರಾದ ರೈತರಿಗೆ, ಅಸಂಘಟಿತ ಕಾರ್ಮಿಕರಿಗೇ, ಆಟೋ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ, ಹೂ ಹಣ್ಣು ತರಕಾರಿ ಬೆಳೆಗಾರರಿಗೆ, ಕಲಾವಿದರು, ಕಲಾವಿದರ ತಂಡಕ್ಕೆ, ಸವಿತಾ ಸಮಾಜದ ವರ್ಗಕ್ಕೆ, ನೇಕಾರರು, ಅಕ್ಕಸಾಲಿಗರು, ಕುಂಬಾರರು,ಮಡಿವಾಳರು, ಟೈಲರ್ ಗಳು, ಮೆಕ್ಯಾನಿಕ್ ಗಳು, ಚಿಂದಿ ಆಯುವ ವರ್ಗಕ್ಕೆ, ಚಮ್ಮಾರರು,
ಬೀದಿ ಬದಿಯ ವ್ಯಾಪಾರಿಗಳಿಗೆ, ಹಮಾಲಿಗಳು, ಕಮ್ಮಾರರು, ಮನೆ ಕೆಲಸದವರಿಗೆ, ಕಟ್ಟಡ ಕಾರ್ಮಿಕ ವರ್ಗ ಸೇರಿದಂತೆ ಹೀಗೆ ರಾಜ್ಯದ ಅನೇಕ ಶ್ರಮಿಕ ವರ್ಗಕ್ಕೆ ವಿಶೇಷ ಆರ್ಥಿಕ ಸಹಾಯ ಧನದ ಪ್ಯಾಕೇಜ್ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಅಂಬಾರಾಯ ಅಷ್ಠಗಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಮುಖಾಂತರ ಮೂರು ಹೊತ್ತು ಉಪಹಾರ, ಊಟದ ವ್ಯವಸ್ಥೆ,ಬಿ.ಪಿ.ಏಲ್, ಎಪಿಎಲ್ ಪಡಿತರರಿಗೆ ಹಾಗೂ ಈ ವರ್ಷ ಅರ್ಜಿ ಸಲ್ಲಿಸಿದವರಿಗು ಕೂಡ ಅಕ್ಕಿ ವಿತರಣೆ, ರಾಜ್ಯದ 6 ಸಾವಿರ ಗ್ರಾಮ ಪಂಚಾಯತಿ ಗಳಿಗೆ ಕೊರೋನಾ ನಿರ್ವಹಣೆಗೆ ಮುಂಗಡವಾಗಿ ತಲಾ 50 ಸಾವಿರ ಬಿಡುಗಡೆ,ರಾಜ್ಯದ ಶಿಕ್ಷಕರ ವರ್ಗ, ಲೈನ್ ಮೆನ್ ಗಳು, ಗ್ಯಾಸ್ ವಿತರಕರನ್ನು ಕೊರೋನಾ ಫ್ರಂಟ್ ಲೈನ್ ವಾರಿಯರ್ ಎಂದು ಪರಿಗಣನೆ,18-45 ವಯಸ್ಸಿನ ಒಳಗಿನ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ,ಪ್ರಾಥಮಿಕ ಕೃಷಿ ಪತ್ತಿನ ಹಾಗೂ
ಸಹಕಾರ ಸಂಘದಿಂದ ತೆಗೆದುಕೊಂಡ ಸಾಲ ಮರುಪಾವತಿಯ ಅವಧಿ ವಿಸ್ತರಣೆ ಸೇರಿದಂತೆ ಹೀಗೆ ಈ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನತೆಯ ನೆರವಿಗೆ ಧಾವಿಸಿದೆ ಎಂದು ತಿಳಿಸಿದ್ದಾರೆ