ಶ್ರಮಿಕರ ಭವನ ನಿರ್ಮಾಣಕ್ಕೆ ಮನವಿ

ಹರಿಹರ.ಸೆ.೧೬; ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಇರುವ ಅಂಗಡಿಗಳಲ್ಲಿ ನೂರಕ್ಕೂ ಹೆಚ್ಚು ಹಮಾಲರು ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಒಂದು ಶ್ರಮಿಕರ ಭವನ ನಿರ್ಮಾಣದ ಅವಶ್ಯಕತೆ ಇದೆ ಎಂದು ಸಂಘದ ಗೌರವ ಅಧ್ಯಕ್ಷ ಹೆಚ್.ಕೆ ಕೊಟ್ರಪ್ಪ ಹೇಳಿದರು.ಇಲ್ಲಿನ ಮಹಾಜೆನಹಳ್ಳಿ ಗ್ರಾಮದೇವತೆ ಹಮಾಲರ ಸಂಘದ ವತಿಯಿಂದ ಶ್ರಮಿಕರ ಭವನ ನಿರ್ಮಾಣಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಿಗೂ ಮತ್ತು ಕಾರ್ಯದರ್ಶಿಗಳು ಮನವಿ ಸಲ್ಲಿಸಿ ಮಾತನಾಡಿದ ಅವರು ಸುಮಾರು ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಅಂಗಡಿಗಳಲ್ಲಿ ೧೦೦ಕ್ಕೆ ಹಮಾಲರು ಕೆಲಸ ನಿರ್ವಹಿಸಿದ್ದಾರೆ ಅವರಿಗೆ ಆವರಣದಲ್ಲಿ ಶ್ರಮಿಕರ ಭವನ ನಿರ್ಮಾಣದ ಅವಶ್ಯಕತೆ ಇದೆ ಸಣ್ಣಪುಟ್ಟ ಕಾರ್ಯಕ್ರಮಗಳು ಸಂಘದ ಚಟುವಟಿಕೆಗಳು ನಡೆಸಲು ಅನುಕೂಲವಾಗುವಂತೆ ಮಾಡಿಕೊಡಬೇಕೆಂದು ಎಂದರು. ಹಿಂದೆ ಸಂಘದ ಹೋರಾಟ ಫಲವಾಗಿ ಇಲ್ಲಿ ನಮ್ಮವರಿಗೆ ಇದೇ ರೀತಿ ಆವರಣದಲ್ಲಿ ಎರಡು ಎಕರೆ ಜಮೀನು ಮಂಜೂರಾಗಿದ್ದುಎAದು ಹೇಳಿದರು. ನಿವೇಶನದಲ್ಲಿ ಕೆಲವರು ಮನೆಯನ್ನು ನಿರ್ಮಿಸಿ ಕೊಂಡಿರುತ್ತಾರೆ ಇನ್ನು ಕೆಲವರು ಮನೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ ಶ್ರಮಿಕರ ಭವನಕ್ಕೆ ಕೂಡಲೇ ನಿವೇಶನ ಒದಗಿಸಿಕೊಡಬೇಕೆಂದು ಸಂಘದ ಅಧ್ಯಕ್ಷ ಹೆಚ್. ಬಿ ರುದ್ರೇಗೌಡ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹನುಮಂತರೆಡ್ಡಿ ಕಾರ್ಯದರ್ಶಿ ವಿದ್ಯಾಶ್ರೀ ಮತ್ತು ಹಮಾಲರು ಉಪಸ್ಥಿತರಿದ್ದರು