ಶ್ರಮಿಕರಿಗೆ ಉಪಹಾರ ವಿತರಣೆ

ಹೊನ್ನಾಳಿ.ಮೇ.೩೧ ; ಪ್ರತಿನಿತ್ಯದಂತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಕಡೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರು,ಹೊರ ರೋಗಿಗಳು,ಎಪಿಎಂಸಿ ಆವರಣದಲ್ಲಿರವ ಶ್ರಮಿಕರಿಗೆ ಉಪಹಾರವನ್ನು ನೀಡಲಾಗುತ್ತಿದೆ.ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಗೈರುಹಾಜರಿಯಲ್ಲಿ ಅವರ ಸಹೋದರ ಎಂ.ಪಿ.ರಮೇಶ್,ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್,ಜಿಲ್ಲಾ ಬಿಜೆಪಿ ಮುಖಂಡರಾದ ಶಾಂತರಾಜ್‌ಪಾಟೀಲ್,ನೆಲಹೊನ್ನೆ ಮಂಜುನಾಥ್ ಹಾಗೂ ತಾಲೂಕು ಬಿಜೆಪಿ ಮುಖಂಡ ಪಲ್ಲವಿರಾಜು ಉಪಹಾರವನ್ನು ವಿತರಿಸಿದರು.ಇದೇ ವೇಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 7 ವರ್ಷ ಪುರೈಸಿದ ಹಿನ್ನಲೆಯಲ್ಲಿ ಸೇವಯೇ ಸಂಘಟನೆ ಎಂಬ ಧ್ಯೇಯದಡಿಯಲ್ಲಿ ತಾಲೂಕು ಬಿಜಪಿ ಘಟಕದಿಂದ ನಗರದ ಹಲವಾರು ಕಡೆಗಳಲ್ಲಿ ಸಸಿ ನೆಟ್ಟು ನಂತರ ಸರ್ಕಾರಿ ಆಸ್ಪತ್ರೆಯಲ್ಲಿರುವ ಸೋಂಕಿತರಿಗೆ ಹಾಗೂ ಹೊರ ರೋಗಿಗಳಿಗೆ ಮಾಸ್ಕ್ ವಿತರಿಸಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ರಾಷ್ಟ್ರೊನ್ನತಿಯೇ ತನ್ನ ಕಾಯಕವೆಂದು ತಿಳಿದು ದಣಿವರಿಯದೆ ರಾಷ್ಟ್ರ ದ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದು ಇದೀಗ ಏಳು ಸಂವತ್ಸರ ಪೂರೈಸಿದೆ ಎಂದು ಹೇಳಿದರು.ತಾಲೂಕು ಬಿಜಪಿ ಮುಖಂಡ ಎಂ.ಪಿ.ರಮೇಶ್ ಮಾತನಾಡಿ,ಕೇವಲ ಏಳು ವರ್ಷದಲ್ಲಿ ಭಾರತವನ್ನು ಬಲಿಷ್ಠ ಭಾರತವನ್ನಾಗಿ ಬದಲಿಸಿದ ಕೀರ್ತಿ ಮಾನನಿಯ ಪ್ರಧಾನಿಯವರಿಗೆ ಸಲ್ಲುತ್ತದೆ ಎಂದರು.ಜಿಲ್ಲಾ ಬಿಜೆಪಿ ಮುಖಂಡರಾದ ಶಾಂತರಾಜ್‌ಪಾಟೀಲ್,ನೆಲಹೊನ್ನೆ ಮಂಜುನಾಥ್,ಫಲ್ಲವಿರಾಜು, ಪ್ರಜ್ವಲ್   ಇದ್ದರು.