ಶ್ರಮಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ : ಹಸನ್ ತಹಶೀಲ್ದಾರ

ಶಿರಹಟ್ಟಿ, ನ 2- ಬಡತನದಲ್ಲಿ ಬೇಯ್ದು, ಕಷ್ಟಗಳನ್ನು ಸೋಸಿ, ಮಕ್ಕಳಿಗೆ ಒಂದಿಷ್ಟೂ ಕಷ್ಟವನ್ನು ತೋರಿಸದೇ ಉತ್ತಮ ವಿದ್ಯಾಭ್ಯಾಸವನ್ನು ದೊರಕಿಸುತ್ತಿರುವ ಪಾಲಕರ ಪಾತ್ರ ದೊಡ್ಡದು. ಶ್ರಮಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಕರ್ನಾಟಕ ಪ್ರಜಾಪರ ವೇದಿಕೆಯ ತಾಲೂಕಾಧ್ಯಕ್ಷ ಹಸನ್ ತಹಶೀಲ್ದಾರ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಪ್ರಜಾಪರ ವೇದಿಕೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಲೇಖನಿ ಮತ್ತು ಶ್ರಮಿಕರಿಗೆ ಮಾಸ್ಕ ನೀಡಿ ಮಾತನಾಡಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಅಧ್ಯಕ್ಷ ಎಂ ಕೆ. ಲಮಾಣಿ ಮಾತನಾಡುತ್ತಾ, ಕರ್ನಾಟಕ ಪ್ರಜಾಪರ ವೇದಿಕೆಯು ಪ್ರಾರಂಭವಾದ ದಿನದಂದಲೂ ವಿನೂತನ ಕಾರ್ಯಕ್ರಮ ಗಳನ್ನು ಮಾಡುತ್ತ ಪಟ್ಟಣವನ್ನು ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಒಯ್ಯಲು ಸಾಮಾಜಿಕ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾದದು ಹಾಗೂ ವಿದ್ಯಾರ್ಥಿಗಳಿಗೆ ರೈತರಿಗೆ ಕಟ್ಟಡ ಕಾರ್ಮಿಕ ರಿಗೆ ಸನ್ಮಾನ ಮಾಡಿ ಅವರ ಆತ್ಮವಿಶ್ವಾಸವನ್ನು ವೃದ್ಧಿಸಲು ಪ್ರೇರಣೆಯನ್ನು ನೀಡಲು ಸಾಧ್ಯವಾಗುತ್ತದೆ. ಪಟ್ಟಣದ ಅಭಿವೃದ್ಧಿಗೆ ಹಾಗೂ ಕರ್ನಾಟಕದ ಶ್ರೇಯಸ್ಸಿಗೆ ಕರ್ನಾಟಕ ಪ್ರಜಾಪರ ವೇದಿಕೆ ಹಾಗೂ ಪದಾಧಿಕಾರಿಗಳು ಸದಾಸಿದ್ಧರಾಗಿರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎ ಆಯ್. ಡಂಬಳ, ಎಂ ಬಿ. ಹಡಪದ, ನೌಶಾದ ಶಿಗ್ಲಿ, ಶಶಿಧರ ದೇಗಾವಿ, ಮಂಜುನಾಥ ಬಳಿಗಾರ, ಪ್ರವೀಣ ಹಡಪದ, ಪ್ರದೀಪ್ ಮೂರಶಿಳ್ಳಿ, ಶಶಾಂಕ ಮತ್ತೂರ, ಗಿರೀಶ ಗೊಜನೂರ, ಸಿಕಂದರ ಶಿಗ್ಲಿ, ಮಹಾಂತೇಶ ಕುರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.