ಶ್ರಮದಾನ ವಿದ್ಯಾರ್ಥಿಗಳು ಜೀವನದಲ್ಲಿ ರೂಢಿಸಿಕೊಳ್ಳಬೇಕು:ಶ್ರೀಕಾಂತ ಪಾಟೀಲ

ಕಲಬುರಗಿ:ಸೆ.10: ಇಲ್ಲಿನ ಸರಕಾರಿ ಡಿಗ್ರಿ ಕಾಲೇಜು ವತಿಯಿಂದ 2021-22ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಧಮ್ಮೂರ ಹಾಗೂ ಮಹಾಗಾಂವ ಕ್ರಾಸನಲ್ಲಿ ಆಯೋಜಿಸಿದ್ದು, ಅದರ ಉದ್ಘಾಟನೆಯು ಮಹಾಗಾಂವ ಗ್ರಾಮ ಪಂಚಾಯತನ ಅಧ್ಯಕ್ಷಿಯವರಾದ ಶ್ರೀಮತಿ ಮನಿಷಾ ನಂದನಕುಮಾರ ಹರಸುರಕರ ಮಾಡಿದರು. ನಂತರ ಮಾತನಾಡಿ ಈ ವಿಶೇಷ ಶಿಬಿರವು ಯಶ್ವಸ್ವಿಯಾಗಲಿ ಎಂದು ಆಶಿಸದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನೀತಾ ಬೂಸ್ಲೆ ವಿದ್ಯಾರ್ಥಿಗಳಲ್ಲಿ ಶ್ರಮದಾನ ಮಾಡುವ ಹವ್ಯಾಸ ಬೆಳೆಯಬೇಕು ಅದನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದರು ವಿದ್ಯಾರ್ಥಿಗಳ ಶಿಸ್ತು ಸಂಯಮ ಹಾಗೂ ಮನಸುಪೂರಕ ಕೆಲ ಮಾಡುವ ಛಲ ಹೊಂದಬೇಕು ಎಂದರು.

 ವೇದಿಕೆ ಮೇಲೆ ಸಿ.ಡಿ.ಸಿ ಸದಸ್ಯರಾದ ಶ್ರೀ. ಶ್ರೀಕಾಂತ ಪಾಟೀಲ ಹಾಗೂ ಡಾ. ಚಂದ್ರಕಾಂತ  ಸಿಂಗೆ ತಮ್ಮ ಅನಿಸಿಕೆಗಳು ವ್ಯಕ್ತ ಪಡಿಸಿದರು.  ಅಧ್ಯಕ್ಷ ಸ್ಥಾನ ವಹಿಸಿದ ಡಾ. ಜೈಕಿಷನ ಠಾಕೂರ ಪ್ರಾಂಶುಪಾಲರು ಮಾತನಾಡುತ್ತಾ ಶಿಭಿರಗಳು ವಿದ್ಯಾರ್ಥಿ ಜೀವನವನ್ನು ಪ್ರಭಾವ ಗೊಳಿಸುವವು ಒಳ್ಳೆಯ ವಿಚಾರ ದೈಹಿಕ ಮಾನಸಿಕ ಪ್ರಯೋಗಗಳೂ ಇಲ್ಲಿ ಸಿಗುತ್ತವೆ ಎಂದರು. ಇದ್ದಕು ಮುಂಚೆ ರಾ.ಸೇ.ಯೋ. ಘಟಕದ ಸಂಯೋಜಕರಾದ ಪ್ರೊ. ಶಂಕರ ಗಣಗೊಂಡ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಬಿರದ ಮಹತ್ವ ಹಾಗೂ ಶಿಬಿರದಲ್ಲಿ ಕೈಗೊಳ್ಳುವ ಶ್ರಮದಾನಗಳು ಮತ್ತು ಶಿಬಿರ ಸುಸುತ್ರವಾಗಿ ನಡೆಯಲು 5-ತಂಡಗಳು ಕಾವೇರಿ, ತುಂಗ, ಗಂಗಾ, ಯಮುನಾ, ಕಪಿಲಾ ಮಾಹಿತಿ ನೀಡಿದರು. ಶಿಬಿರಾಥಿಗಳಾದ ಮಾಣಿಕೇಶ್ವರಿ, ಕಾವೇರಿ, ಕರಿಷ್ಮ, ಮಂಗೇಶ, ಜಯಶ್ರೀ ಎನ್.ಎಸ್.ಎಸ್. ಗೀತೆ ಹಾಡಿದರು. ಪ್ರೊ. ಅಣ್ಣರಾಯ ಎಸ್. ಪಾಟೀಲ ಸ್ವಾಗತಿಸಿದರು, ಪ್ರೊ. ರೇಣುಕಾಬಾಯಿ ವಂಧಿಸಿದರು, ಪ್ರೊ. ಸುಜಾತಾ ದೊಡ್ಡಮನಿ ಪ್ರತಿಜ್ಞಾವಿಧಿ ಬೋಧಿಸಿ ಕಾರ್ಯಕ್ರಮ ನಿರೂಪಿಸಿದರು,