ಶ್ರಮದಾನ ಆತ್ಮತೃಪ್ತಿಯನ್ನು ಕೊಡುತ್ತದೆ… ಲಕ್ಷ್ಮೀಬಾಯಿ ನಾನಾವಟೆ


ಸಂಜೆವಾಣಿ ವಾರ್ತೆ
ಸಂಡೂರು : ಅ: 19 – ಮನುಷ್ಯನಿಗೆ ಭಗವಂತ ಏನೆಲ್ಲ ನೀಡಿದ್ದರು ನಮ್ಮ ಸ್ವಾರ್ಥ ಜೀವನದಲ್ಲಿ ಆತ್ಮ ತೃಪ್ತಿಯನ್ನು ಕಳೆದುಕೊಂಡಿದ್ದೇವೆ. ಸಮಾಜಿಕ ಸೇವೆಯಲ್ಲಿ ಒಂದಾದ ಸ್ವಚ್ಛತಾ ಕಾರ್ಯವನ್ನು ಶ್ರಮದಾನದ ಮೂಲಕ ಮಾಡಿದಾಗ ಅದರಿಂದ ಸಿಗುವ ಆತ್ಮತೃಪ್ತಿಯೂ ಬೇರೆಲ್ಲಿಯೂ ಸಿಗುವುದಿಲ್ಲಾ ಎಂದು ಶ್ರೀ ಶೈಲೇಶ್ವರ ವಿದ್ಯಾಕೇಂದ್ರದ ಗೌರವಾಧ್ಯಕ್ಷರಾದ ಲಕ್ಷ್ಮೀಬಾಯಿ ನಾನಾವಟೆಯವರು ತಿಳಿಸಿದರು.
ಸಂಡೂರು ಪಟ್ಟಣದ ಮರಾಠ ಸಮಾಜದ ಹತ್ತಿರದಲ್ಲಿರುವ ವಿಠೋಬ ದೇವಸ್ಥಾನ ಹಾಗೂ ಶನೇಶ್ವರ ಮತ್ತು ಆಂಜನೇಯ ದೇವಸ್ಥಾನ ಮತ್ತು ಆವರಣದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಯಿಸಿ ಮಾತನಾಡುತ್ತಾ ಅವರು ಸಾರ್ವಜನಿಕ ಸ್ಥಳಗಳು ಮತ್ತು ದೇವಸ್ಥಾನಗಳು ಅ-ಸ್ವಚ್ಛತೆಯಿಂದ ಕೂಡಿದು, ಪ್ರತಿದಿನ ನೂರಾರು ಜನರು ಬೇಟಿ ನೀಡುವ ಸ್ಥಳಗಳು ಆಗಿರುತ್ತವೆ ಇಂತಹ ಸ್ಥಳಗಳನ್ನು ಸ್ವಚ್ಛತೆ ಮಾಡುವುದರಿಂದ ಆತ್ಮ ತೃಪ್ತಿಯ ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಹರಿವು ತನ್ನಂತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಮಾರ ನಾನಾವಟೆಯವರು ಮಾತನಾಡುತ್ತಾ ಯುವ ಪಿಳಿಗೆಗೆ ಸಾಮಾಜಿಕ ಜಾಗೃತಿ ಹಾಗೂ ಸಮಾಜದ ಜವಬ್ದಾರಿಯನ್ನು ತರುವುದು ಅವಶ್ಯವಾಗಿದೆ ಅಂತಹ ಕೆಲಸವನ್ನು ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಭಾರತೀಯ ಸ್ವರಾಜ್ಯ ಸಂಸ್ಥೆಯ ಸಹಯೋಗದಲ್ಲಿ ಇಂದು ಶ್ರಮದಾನವನ್ನು ಹಮ್ಮಿಕೊಳ್ಳಲಾಗಿದೆ ಇದರಲ್ಲಿ ನಮ್ಮ ಶಾಲೆಯ ಕನ್ನಡ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಿಬ್ಬಂದಿಗಳು ಹಾಗೂ ಪ್ರೌಢಶಾಲೆಯ ಕೆಲವು ವಿದ್ಯಾರ್ಥಿಗಳು ಭಾಗಿಯಾಗಿ ಶಿಕ್ಷಣದ ಜೊತೆಗೆ ಸಾಮಾಜಿಕ ಜವಬ್ದಾರಿಯನ್ನು ಇಂದು ನಿರ್ವಹಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಈ ಸಂದರ್ಭ ಸಿಬ್ಬಂದಿಗಳು ವಿದ್ಯಾರ್ಥಿಗಳು ಭಾಗಿಯಾಗಿ ದೇವಸ್ಥಾನದ ಆವರಣವನ್ನು ಶ್ರಮದಾನದ ಮೂಲಕ ಸುಚಿಗೋಳಿಸಿದನ್ನು ಕಂಡು ಸಾರ್ವಜನಿಕರು ಹರ್ಷವನ್ನು ವ್ಯಕ್ತಪಡಿಸಿದರು.
ಸಂಡೂರು ಪಟ್ಟಣದಲ್ಲಿರುವ ವಿಠೋಬ ದೇವಸ್ಥಾನ ಹಾಗೂ ಶನೇಶ್ವರ ದೇವಸ್ಥಾನ ಮತ್ತು ಆಂಜನೇಯ ದೇವಸ್ಥಾನ ಹಾಗೂ ಆವರಣವನ್ನು ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆಯ ಸಹಯೋಗದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಗಿತು.

One attachment • Scanned by Gmail