ಶ್ರದ್ಧೆ, ಭಕ್ತಿಯ ರಾಮನವಮಿ ಆಚರಣೆ

ಬೀದರ್:ಏ.18: ರಾಮನವಮಿಯನ್ನು ನಗರದ ಬಿ.ವಿ. ಭೂಮರಡ್ಡಿ ಕಾಲೇಜು ರಸ್ತೆಯಲ್ಲಿ ಇರುವ ರಾಮಚೌಕನಲ್ಲಿ ಬುಧವಾರ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ವಿದ್ಯಾನಗರ ವಿಕಾಸ ಸಂಘದ ಅಧ್ಯಕ್ಷ ಶಾಮ್ ಹಲಮಂಡಗೆ ರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸ್ತೋತ್ರಗಳ ಪಠಣ ಮಾಡಲಾಯಿತು.
ಇದಕ್ಕೂ ಮುನ್ನ ಮೈಲೂರ ರಸ್ತೆಯಲ್ಲಿ ಇರುವ ಹನುಮಾನ ಚೌಕನಿಂದ ರಾಮಚೌಕವರೆಗೆ ಯುವಕರು ಬೈಕ್ ರ್ಯಾಲಿ ನಡೆಸಿ ಗಮನ ಸೆಳೆದರು. ರ್ಯಾಲಿ ಉದ್ದಕ್ಕೂ ಜೈ ಶ್ರೀರಾಮ ಘೋಷಣೆ ಮೊಳಗಿಸಿದರು.
ವಿದ್ಯಾನಗರ ಕಾಲೊನಿಯ ಪ್ರಮುಖರಾದ ಸಚ್ಚಿದಾನಂದ ಚಿದ್ರೆ, ಡಾ. ಲೋಕೇಶ ಹಿರೇಮಠ, ಬಸವರಾಜ ಬಿರಾದಾರ, ಬಸವರಾಜ ಮಲ್ಕಪ್ಪ, ನಾಗರಾಜ ಬಿರಾದಾರ, ಹಣಮಂತ ಬುಳ್ಳಾ, ಅನಿಲ್ ಆನಂದೆ, ಆಕಾಶ ಚಿದ್ರೆ, ಝರಣಪ್ಪ, ಪ್ರಭು ಉದಗೀರೆ, ಸುನೀಲ್ ಗೌಳಿ, ಮಹಾರುದ್ರ ನೇಳಗೆ ಮೊದಲಾದವರು ಇದ್ದರು.