ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ನಿಶ್ಚಿತ : ಕಲ್ಯಾಣಪ್ಪ ಪಾಟೀಲ್

ಸೇಡಂ,ಜು,21: ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹಾಗೂ ಪೂರಕ ತಯಾರಿಯನ್ನು ಹೇಗೆ ಮಾಡಿಕೊಳ್ಳಬೇಕೆಂಬ ಕುರಿತು ಮಾಹಿತಿ ನೀಡುವ ಈ ಕಾರ್ಯಾಗಾರವನ್ನು ಆಯೋಜಿಸಿರುವುದು ಅತ್ಯಂತ ಪ್ರಸ್ತುತ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕೋರ್ಸ ನ ಬಗ್ಗೆ ಅತಿಯಾದ ಆಸಕ್ತಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ, ಯಶಸ್ಸು ಒಲಿಯುವುದು ನಿಶ್ಚಿತ ಎಂದು ಆಅಅ ಬ್ಯಾಂಕ್ ನ ನಿರ್ದೇಶಕರು ಹಾಗೂ ಬಿಜೆಪಿ ಹಿರಿಯ ಮುಖಂಡ ಕಲ್ಯಾಣಪ್ಪ ಪಾಟೀಲ್ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ನಮೋ ಬುದ್ದ ಸೇವಾ ಕೇಂದ್ರ ಮಳಖೇಡ ವತಿಯಿಂದ “ಸ್ಪರ್ದಾತ್ಮಕ ಪರೀಕ್ಷೆಗಳಾದ Sಆಂ,ಈಆಂ,ಏಂS,ಹಾಗೂ IಂS”ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮೋಬುದ್ದ ಸೇವಾ ಕೇಂದ್ರ ಮತ್ತು ಚಾರಿಟೇಬಲ್ ಟ್ರಸ್ಟ್ ನ ಈ ಕಾರ್ಯ ವೈಖರಿ ಮೆಚ್ಚುವಂತದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಸಾಪ ತಾಲೂಕಾ ಗೌರವ ಪ್ರದಾನ ಕಾರ್ಯದರ್ಶಿ ಪ್ರಕಾಶ ಗೊಣಗಿಯವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಇಂಥಹ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಮಕ್ಕಳಿಗೆ ಸ್ಪರ್ದಾತ್ಮಕ ಪರೀಕ್ಷೆಗಳು ಎದುರಿಸಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು. ಬಿಜೆಪಿಯ ಯುವ ನಾಯಕರಾದ ಗುರು ತಳಕಿನ್ ಹಾಗೂ ಶಿಕ್ಷಕ ಚನ್ನಬಸಪ್ಪ ಬಿರಾದರ ? ಮಾತನಾಡಿದರು.ವೇದಿಕೆಯ ಮೇಲೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಶರಣು ಯಂಗನ್ ? ಸಾಬು ಸೋಲ್ಲಾಪೂರ ಉಪಸ್ಥಿತರಿದ್ದರು.ಈ ವೇಳೆಯಲ್ಲಿ ಮಳಖೇಡ ?ಹೂಡಾ.ಬಿ?ಮಲಕೂಡ? ಸಂಗಾವಿ ಎಂ ಹಾಗೂ ತೆಂಗಳಿ ಗ್ರಾಮದ ಪದವಿ ಹಾಗೂ ಪದವಿ ಪೂರ್ವ ಮಕ್ಕಳು ಇದ್ದರು.
ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನು ಸಂಸ್ಥೆಯ ಅಧ್ಯಕ್ಷರಾದ ರಾಜು ಕಟ್ಟಿ ನೇರವೆರಿಸಿದರೇ ? ನಿರೂಪಣೆ ಕೃಷ್ಣ ತೆಂಗಳಿ ?ವಂದಾನಾರ್ಪಣೆ ನಾಗೇಶ್ ನೇರವೆರಿಸಿ ಕೊಟ್ಟರು.