ಶ್ರದ್ಧಾ ಹತ್ಯೆ; ಸ್ಫೋಟಕ ಮಾಹಿತಿ ಬಹಿರಂಗ

ನವದೆಹಲಿ,ನ.೧೭-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಲ್ಕರ್ ಮರ್ಡರ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಜೀವನ ಪೂರ್ತಿ ಸಂಗಾತಿಯಾಗಿ ಸುಖ ಜೀವನ ನಡೆಸಲು ಪೋಷಕರಿಂದ ಜಗಳವಾಡಿಕೊಂಡು ದೂರವಾಗಿದ್ದ ಶ್ರದ್ಧಾ ತನ್ನ ಪ್ರಿಯತಮನ ಕೈಯಿಂದಲೇ ೩೫ ತುಂಡುಗಳಾಗಿದ್ದಾಳೆ. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಪೊಲೀಸರು ಬಂಧಿಸಿ ಶ್ರದ್ಧಾಳ ಮೃತದೇಹದ ತುಂಡುಗಳನ್ನ ಎಸೆದ ಅರಣ್ಯ ಪ್ರದೇಶಕ್ಕೆಲ್ಲ ಕರೆದುಕೊಂಡು ಹೋಗಿ ಮಹಜರು ಮಾಡಿಸಿ ನಡೆಸುತ್ತಿರುವ ವಿಚಾರಣೆಯಲ್ಲಿ ಪ್ರಕರಣದ ಬಗೆಗಿನ ಭಯಾನಕ ಸಂಗತಿಗಳು ಬಯಲಾಗಿವೆ.
ಆರೋಪಿ ಅಪ್ತಾಬ್ ಮನಸ್ಥಿತಿ ನೋಡಿದರೆ ಯಾರಿಗಾದರೂ ನಡುಕ ಉಂಟಾಗಲಿದೆ. ಈತ ತನ್ನ ಪ್ರೇಯಸಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ಗೆ ತುಂಬಿಸಿದರೂ ಕೊಂಚವೂ ಭಯವಿಲ್ಲದೆ ಮತ್ತೊಬ್ಬ ಯುವತಿಯ ಜೊತೆ ತನ್ನ ರೂಮಿನಲ್ಲೇ ಸರಸ ಸಲ್ಲಾಪವಾಡುತ್ತಿದ್ದ. ಶ್ರದ್ಧಾರನ್ನು ಭಯಾನಕ ವಾಗಿ ಕೊಲೆಗೈದು ತುಂಡರಿಸಿ ಬೇರೆ ಮಾಡಿದ ತಲೆಯನ್ನು ಪ್ರತಿದಿನ ಫ್ರಿಡ್ಜ್ ತೆರೆದು ಗಂಟೆಗಟ್ಟಲೆ ಶ್ರದ್ಧಾ ಮುಖವನ್ನೇ ದಿಟ್ಟಿಸುತ್ತಿದ್ದ ಅಫ್ತಾಬ್ ಫ್ರಿಡ್ಜ್ ಬಾಗಿಲು ತೆಗೆದು ಪದೆ ಪದೆ ಶ್ರದ್ಧಾ ಮುಖ ನೋಡುತ್ತಿದ್ದ.
ತಲೆ ಕಾಡಿಗೆ ಎಸೆದಿದ್ದ:
ಅಷ್ಟೇ ಅಲ್ಲ ಶ್ರದ್ಧಾ ಗುರುತು ಅಳಿಸಲು ಕೈ ಬೆರಳು ಸೇರಿದಂತೆ ದೇಹದ ಹಲವು ಭಾಗಗಳನ್ನು ಮೆಹ್ರೌಲಿ ಮಾರುಕಟ್ಟೆಯಿಂದ ಬ್ಲೋವರ್ ಖರೀದಿಸಿ ತಂದು ಸುಟ್ಟು ಹಾಕಿ ಕೊನೆಯದಾಗಿ ಶ್ರದ್ಧಾಳ ತಲೆಯನ್ನು ಕಾಡಿಗೆ ಎಸೆದಿದ್ದಾನೆ.
ದೆಹಲಿ ಪೊಲೀಸರ ಎದುರು ಅಫ್ತಾಬ್ ಪೂನಾವಾಲಾ ಆಘಾತಕಾರಿ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ. ಶ್ರದ್ಧಾ ಕೊಲೆ ಮಾಡುವ ವಾರದ ಹಿಂದೆಯೇ ಆಕೆಯನ್ನು ಮುಗಿಸಲು ಅಫ್ತಾಬ್ ಪ್ಲಾನ್ ಮಾಡಿಕೊಂಡಿದ್ದ. “ನನಗೂ ಶ್ರದ್ಧಾಗೂ ತಿಂಗಳಾನುಘಟ್ಟಲೆ ಆಗಾಗ ಜಗಳ ಆಗುತ್ತಿದ್ದಂತೆ ನಾನು ಅವಳನ್ನು ಕೊಲ್ಲಲು ಕಾರಣ” “ನಾನು ಬೇರೆ ಯುವತಿಯರ ಜೊತೆ ಮಾತನಾಡುವುದು ಶ್ರದ್ಧಾ ವಾಲ್ಕರ್ ಗೆ ಇಷ್ಟ ಪಡದೇ ಪದೇ ಪದೇ ಜಗಳ ಮಾಡುತ್ತಿದ್ದಳು “ನಾನು ಬೇರೆ ಹುಡುಗಿಯರೊಂದಿಗೆ ಫೋನ್ ನಲ್ಲಿ ಮಾತಾಡಲು ಶ್ರದ್ಧಾ ಬಿಡ್ತಿರಲಿಲ್ಲ.
ವಾರದ ಮುನ್ನ ಸ್ಕೆಚ್:
ನಾನು ಬೇರೆ ಹುಡುಗಿಯರೊಂದಿಗೆ ಮಾತಾಡ್ತಿದ್ದನ್ನು ಅನುಮಾನಿಸಿ, ಕೋಪಗೊಳ್ಳುತ್ತಿದ್ದಳು.ಕೊಲೆಯಾದ ಒಂದು ವಾರದ ಮುನ್ನವೇ ಅವಳನ್ನು ಕೊಲ್ಲಬೇಕಿತ್ತು, ಆದರೆ ಮಿಸ್ ಆಯ್ತು” ಎಂದು ದೆಹಲಿ ಪೊಲೀಸ್ ಅಧಿಕಾರಿಗಳ ಮುಂದೆ ಅಫ್ತಾಬ್ ಪೂನಾವಾಲಾ ಬಾಯ್ಬಿಟ್ಟಿದ್ದಾನೆ.
ಜಗಳ ಮಾಡ್ತಾ ಮಾಡ್ತಾ ಎಮೋಷನ್ ಶ್ರದ್ಧಾ ಭಾವುಕಳಾದಳು ಅಳೋದಕ್ಕೆ ಶುರು ಮಾಡಿದ್ಳು..ಅದಕ್ಕೆ ಬಿಟ್ಟಿದ್ದೆ” ಆದರೆ ಕೊನೆಗೂ ಪ್ರಾಣ ತೆಗೆದೆ ಎಂದು ಒಪ್ಪಿಕೊಂಡಿದ್ದಾನೆ.
ಮಾತಿಗೆ ಮಾತು ಬೆಳೆದಿದ್ದರಿಂದ ಶ್ರದ್ಧಾಳ ಕಥೆ ಮುಗಿಸಿದೆ”. ನಾನೇ ಶ್ರದ್ಧಾ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಕತ್ತು ಹಿಸುಕಿ ಕೊಲೆ:
ಕೊಲೆ ನಂತರ ಅಫ್ತಾಬ್ ಬಚಾವಾಗಲು ಸಿನಿಮೀಯ ಶೈಲಿಯಲ್ಲಿ ಆಪರೇಷನ್ ಮಾಡಿದ್ದಾನೆ. ಶ್ರದ್ಧಾಳ ಮೇಲೆ ಕುಳಿತು ಕತ್ತು ಹಿಸುಕಿ ಅಮಾನುಷವಾಗಿ ಕೊಂದ ನಂತರ ಆತ ಶ್ರದ್ಧಾ ಶವವನ್ನು ಹಾಗೆಯೇ ಎಲ್ಲಿಯಾದರೂ ಬಿಸಾಡಿದರೆ, ತಾನು ಸಿಕ್ಕಿಬೀಳುವ ಭಯದಲ್ಲಿ ಸಾಕ್ಷಿ ಸಿಗದಂತೆ ಮಾಡಲು ಗೂಗಲ್ ನಲ್ಲಿ ಪದೇ ಪದೇ ಹುಡುಕಾಟ ನಡೆಸಿದ್ದಾನೆ.
ಸಾಕ್ಷಿನೇ ಸಿಗದಂತೆ ಮಾಡಲು ಹೇಗೆಲ್ಲಾ ಶವ ಕತ್ತರಿಸಬೇಕು ಗೂಗಲ್, ಯೂಟ್ಯೂಬ್ ನಲ್ಲೂ ತಲಾಶ್ ಮಾಡಿದ್ದಾನೆ. “ನಾನು ಹೆಚ್ಚಾಗಿ ಕ್ರೈಮ್ ಸೀರಿಯಲ್ಸ್ ನೋಡುತ್ತಿದ್ದರಿಂದ ಮೃತದೇಹವನ್ನು ವಿಲೇವಾರಿ ಹೇಗೆಂದು ಸಂಚು ಮಾಡಿದೆ”. ಶ್ರದ್ಧಾ ದೇಹ ತುಂಡು ತುಂಡಾಗಿ ನಾನೇ ಕತ್ತರಿಸಿ ಹಾಕಿದ್ದೆ ಎಂದು ಹಂತಕ ಅಫ್ತಾಬ್ ಒಪ್ಪಿಕೊಂಡಿದ್ದಾನೆ.
ಇನ್ಸ್ಟಾಗ್ರಾಮ್ ಅಪರೇಟ್:
ಕೊಲೆ ಮಾಡಿದ ನಂತರದ ದಿನಗಳಲ್ಲಿ ಶ್ರದ್ಧಾ ಇನ್ಸ್ಟಾಗ್ರಾಮ್ ಅಕೌಂಟ್ ಆಪರೇಟ್ ಮಾಡುತ್ತಿದ್ದೆ. ಶ್ರದ್ಧಾ ಫ್ರೆಂಡ್ಸ್ ಜತೆಗೂ ಚಾಟಿಂಗ್ ಮಾಡುತ್ತಿದ್ದೆ. ಶ್ರದ್ಧಾ ಬದುಕಿದ್ದಾಳೆ ಎಂದು ಬಿಂಬಿಸಲು ಶ್ರದ್ಧಾ ಅಕೌಂಟ್ ಆಪರೇಟ್ ಮಾಡುತ್ತಿದ್ದೆ ಎಂದಿದ್ದಾನೆ.

ಲಿವರ್ ಹಾಗೂ ಕರುಳನ್ನು ಕೈಮಾದಂತೆ ಸಣ್ಣ ಸಣ್ಣದಾಗಿ ಕತ್ತರಿಸಿದ. ಹಂತಕ ಅಫ್ತಾಬ್ ಅಮಾನುಷತೆ, ಕ್ರೂರತೆ ಕೃತ್ಯ ಕಂಡು ದೆಹಲಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ಎಫ್ ಎಸ್ ಎಲ್ ಪರೀಕ್ಷೆ:
ಪೊಲೀಸರು ಸದ್ಯ ಹಂತಕ ಅಫ್ತಾಬ್?ನನ್ನು ಕಾಡಿಗೆ ಕರೆದೊಯ್ದು ಮಹಜರ್ ಮಾಡಿಸಿದ್ದಾರೆ. ಮಹಜರು ವೇಳೆ ಸಿಕ್ಕಿರುವ ಮನುಷ್ಯ ದೇಹ ಹೋಲುವ ೧೦ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಡಿಎನ್‌ಎಗೆ ಮ್ಯಾಚ್ ಆಗುತ್ತಾ ಎಂದು ವಿಧಿವಿಜ್ಞಾನ ತಜ್ಞರು ಪರೀಕ್ಷಿಸಲಿದ್ದಾರೆ.