ಶ್ರದ್ಧಾ ಭಕ್ತಿಯೊಂದಿಗೆ ಅದ್ಧೂರಿ ಮೊಹರಂ ಆಚರಣೆ

ಸೈದಾಪುರ:ಜು.30:ಹಿಂದೂ ಮುಸ್ಲಿಂರ ಬಾವೈಕ್ಯತೆಯ ಸಾಕ್ಷಿಯಾದ ಮೊರಹಂ ಹಬ್ಬದ ಕೊನೆಯ ದಿನವಾದ ಮಂಗಳವಾರ ಹಸನ್ ಅಲಿ, ಅಬ್ಬಾಸ್ ಅಲಿ, ಖಾಸಿಂ ಅಲಿ, ಹುಸೆನ್ ಅಲಿ, ಚಾಂದ್ ಪೀರ್ ದೇವರುಗಳ ಅದ್ಧೂರಿ ಮೆರವಣಿಗೆ ಜರಗಿತು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿರುವ ಮಸೀದಿಯಿಂದ ಆರಂಭವಾದ ಮರೆವಣಿಗೆ ಬಸವೇಶ್ವರ ವೃತ್ತ, ಗಂಗಾ ನಗರ ಸೇರಿದಂತೆ ಲಕ್ಷ್ಮೀ ನಗರದವರೆಗೆ ಜರಗಿತು. ಮುಸ್ಲಿಂ ಭಾಂಧವರು ಭಕ್ತರಿಗೆ ಯುವಕರು ಹಾಲು ಹಂಚಿದರು. ಮೆರವಣಿಗೆ ಬರುವ ಮಾರ್ಗದ್ದೂದ್ದಕ್ಕೂ ನೀರು ಹಾಕಿ ಮಹಿಳೆಯರು ಮಕ್ಕಳು ಸ್ವಾಗತಿಸಿ ಆಶೀರ್ವಾದ ಪಡೆದರು. ರಸ್ತೆ ಪಕ್ಕದಲ್ಲಿ ನೂರಾರು ಜನರು ಭಾಗವಹಿಸಿ ಹಬ್ಬಕ್ಕೆ ಸಾಕ್ಷಿಯಾದರು. ನಂತರ ಪಿರ ದೇವರ ಧಪನ್ ನಡೆಯಿತು.
ಗ್ರಾಮದ ಹಿರಿಯ ಮುಖಂಡ ಅಂಜಪ್ಪ ಮಲ್ಹಾರ್, ಗ್ರಾಪಂ ಸದಸ್ಯ ಶರಣಪ್ಪ ಬೈರಂಕೊಂಡಿ, ವಲಿಯೋದ್ಧಿನ್, ಲತ್ತಿಫ್, ಭೀಮಪ್ಪ ಭಾಲಛೇಡ್, ಚನ್ನಮಲ್ಲಪ್ಪ ಪಸಪೂಲ್, ಮೂಬೂಬ್ ಸಾಬ್, ಅಲ್ಲಾಭಾಷಾ ಹಿಚಿಗೇರಿ, ಮುಸ್ತಾಕ್, ಫಸಲ್, ದಾವೂದ್, ಅಬೂಬಕರ್, ಇಮ್ತಿಯಾಜ್, ಲಕ್ಷ್ಮಣರೆಡ್ಡಿ ಸೇರಿದಂತೆ ಇತರರಿದ್ದರು.