ಶ್ರದ್ಧಾ ಭಕ್ತಿಯಿಂದ ಗಣಪತಿ ವಿಸರ್ಜನೆ

ಅರಕೇರಾ.ಸೆ.೦೬-ಅರಕೇರಾ ಶ್ರೀ ಆಂಜಿನಯ್ಯ ದೇವಸ್ಥಾನದಲ್ಲಿ ಹಿಂದೂ ಗಜಾನನ ಯುವ ವೇದಿಕೆಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ಶ್ರದ್ಧಾ ಭಕ್ತಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಭಾನುವಾರ ವಿಸರ್ಜನೆ ಮಾಡಲಾಯಿತು.
ಗಣೇಶ ಚತುರ್ಥಿ ದಿನದಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಐದು ದಿನಗಳವರೆಗೆ ನಿತ್ಯ ಪೂಜೆ, ನೈವೆದ್ಯೆ, ಕಾಯಿ ಕರ್ಪೂರ ಅರ್ಪಿಸಲಾಗಿತ್ತು. ತಳಿರು ತೋರಣಗಳಿಂದ ಶೃಂಗಾರಗೊಂಡ ತೆರೆದ ವಾಹನದಲ್ಲಿ ಗಣೇಶನ್ನು ಮೆರವಣಿಗೆ ಮಾಡಿದರು. ದರ್ಶನಕ್ಕೆ ಬಂದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಶಾಂತಿ ಹಾಗೂ ಸೌಹಾರ್ಧತೆಯಿಂದ ವಿಸರ್ಜನೆಯಲ್ಲಿ ಪಾಲ್ಗೊಂಡ ಯುವಕರಿಗೆ ಹಿಂದೂ ಗಜಾನನ ಯುವ ವೇದಿಕೆ ಅಭಿನಂದನೆ ಸಲ್ಲಿಸಿತು.
ಪ್ರಮುಖರಾದ ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ, ರಾಚಯ್ಯ ಸ್ವಾಮಿ ಮಠಪತಿ,ಕೆ.ಅನಂತರಾಜನಾಯಕ,ಕೆ,ಭಗವಂತ್ರಾಯನಾಯಕ ಶರಣಯ್ಯ ಸ್ವಾಮಿ,ಸಿದ್ದಪ್ಪಪೈಕಾರ. ಗಂಗಯ್ಯ ಸ್ವಾಮಿ, ಬೂದೆಪ್ಪ ಸಾಹುಕಾರ, ಕೆ.ವಿರೇಶ ಸಾಹುಕಾರ, ಶರಣಪ್ಪ ಬಳೆ, ರವಿ ನಾಯಕ, ವಿಶ್ವನಾಥ ಹೊಸಮನಿ, ಮುದುಕಪ್ಪ ಮೆಣಸಿನಕಾಯಿ, ಪಂಪಣ್ಣ, ವೀರಭದ್ರ ಕುಂಬಾರ, ಶಿವಕುಮಾರ, ಶೇಖರಪ್ಪ ಗುಡಿ, ಅಮರೇಶ ಕೆಂಪೆಗೌಡ ಮತ್ತೀತರರಿದ್ದರು.
ಅದೇ ರೀತಿ ಶ್ರೀಬಸವೇಶ್ವರ ವೃತ್ತದ,ಡಾ.ಬಿ.ಆರ್ .ಅಂಬೇಡ್ಕರ್ ವೃತ್ತ,ವೆಂಕೋಬನಾಯಕ ಬಿಚ್ಚದ ಇವರ ಕಾಂಪ್ಲೇಕ್ಸ ನಲ್ಲಿ.ಕುಂಬಾರ ಓಣಿಯಲ್ಲಿನ ಗಣೇಶಮೂರ್ತಿಗಳನ್ನು ನಾರಯಪೂರ ಬಲದಂಡೆಕಾಲುವೆಯಲ್ಲಿ ವಿಸರ್ಜನೆಮಾಡಿದರು.