ಶ್ರದ್ಧಾ ಭಕ್ತಿಗಳಿಂದ ಶ್ರೀ ಶಂಕರಚಾರ್ಯರ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.26: ನಗರದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜಗದ್ಗುರು ಆದಿ ಶ್ರೀ ಶಂಕರಚಾರ್ಯರ ಜಯಂತಿ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಗಳಿಂದ ಜರುಗಿತು.
 ಶ್ರೀ ಶಂಕರರು  ತಮ್ಮ ಅತಿ ಚಿಕ್ಕ ವಯಸ್ಸಿನಲ್ಲಿ ದೇಶದಾದ್ಯಂತ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿ ವಿಶ್ವಕ್ಕೆ ಶಂಕರ ಫಿಲಾಸಫಿ ನೀಡಿದ್ದಾರೆ.
 ಆದಿಗುರು ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ನಗರದ ಶಾರದಾ ಶಂಕರ ಸೇವಾ ಸಮಿತಿ, ತಾಲ್ಲೂಕು ಬ್ರಾಹ್ಮಣ ಸಂಘ ಹಾಗೂ ನಗರದ ತ್ರಿಮಸ್ಥ ವಿಪ್ರ ಬಾಂದವರು ಸೇರಿ ಆಚರಿಸಿದರು.
ಜಯಂತಿ ಕಾರ್ಯಕ್ರಮದ ಅಂಗವಾಗಿ ಶೃಂಗೇರಿ ಭಜನಾ ಪದ್ಧತಿಯಂತೆ ಭಜನೆ ಮತ್ತು ಶಾಂಕರ ಸ್ತೋತ್ರ ಪಾರಾಯಣಗಳನ್ನು ಹಮ್ಮಿಕೊಳ್ಳಲಾಗಿತ್ತು.
 ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ಗಣಪತಿ ಮತ್ತು ಮೇಧಾದಕ್ಷಣಾಮೂರ್ತಿ ಹೋಮ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.
 ಭಾವಚಿತ್ರಕ್ಕೆಪೂಜೆ ಸಲ್ಲಿಸಿ ಪುಷ್ಪವೃಷ್ಟಿ  ಮಹಾಮಂಗಳಾರತಿಯ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.