ಶ್ರದ್ಧಾಕೇಂದ್ರಗಳ ಸ್ವಚ್ಚತೆ

ಸಂಡೂರು:ಜ:12:ಸಾರ್ವಜನಿಕ ಸ್ಥಳಗಳು ಎಂದರೆ ಎಲ್ಲರೂ ಸಹ ತಾತ್ಸಾರ ಮಾಡುವಂತಹದ್ದು, ಅದರಲ್ಲೂ ದೇವಸ್ಥಾನಗಳಲ್ಲಿ ಎಲ್ಲೆಂದರಲ್ಲಿ ಹೊಲಸನ್ನು ಮಾಡುತ್ತೇವೆ, ಅದರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯವತಿಯಿಂದ ತಾಲೂಕಿನಾದ್ಯಂತ ಇರುವ 95 ಶ್ರದ್ಧಾಕೇಂದ್ರಗಳನ್ನು ಸ್ವಚ್ಚಗೊಳಿಸುವ ಕಾರ್ಯ ಮಾಡಲಾಗುವುದು ಎಂದು ತಾಲೂಕು ಯೋಜನಾಧಿಕಾರಿ ಪ್ರಸಾದ್ ತಿಳಿಸಿದರು.
ಅವರು ತಾಲೂಕಿನ ತಾರಾನಗರ ವಲಯದ ಭುಜಂಗನಗರ ಗ್ರಾಮದ ಶ್ರೀ ಅಂಜಿನೇಯಸ್ವಾಮಿ ದೇವಸ್ಥಾನ ಹಾಗೂ ಊರಮ್ಮ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ವತಿಯಿಂದ ಈಗಾಗಲೇ ಕೆರೆಗಳ ಹೂಳು ಎತ್ತುವುದು, ರೈತರಿಗೆ ತರಬೇತಿನೀಡುವುದು. ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ಧನಸಹಾಯ ಮಾಡುವುದು, ಸ್ತ್ರೀ ಶಕ್ತಿ ಸಂಘಗಳ ಮೂಲಕ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದು, ವಿದ್ಯಾರ್ಥಿಗಳಿ ವಿದ್ಯಾರ್ಥಿವೇತನ ನೀಡುವುದು ಅನ್‍ಲೈನ್ ತರಗತಿಗೆ ಟ್ಯಾಬ್, ಕಂಪ್ಯೂಟರ್ ತರಬೇತಿಯನ್ನು ನೀಡುವಂತಹ ಕಾರ್ಯಮಾಡುವುದರ ಜೊತೆಗೆ ಶ್ರದ್ಧಾಕೇಂದ್ರಗಳ ಸ್ವಚ್ಚತೆಗಾಗಿ ತಾಲೂಕಿನಾದ್ಯಂತ ಹಸಿ ಕಸ, ಒಣ ಕಸ ಸಂಗ್ರಹದ ಡಸ್ಟಬಿನ್ ನೀಡಲಾಗಿದೆ, ಅದರ ಜೊತೆಯಲ್ಲಿ ಖುದ್ದು ಸಂಘದ, ಒಕ್ಕೂಟದ ಪದಾಧಿಕಾರಿಗಳು ಸ್ವಚ್ಚತಾ ಕಾರ್ಯ ಮಾಡುವುದರ ಜೊತೆಗೆ ಜಾಗೃತಿಯನ್ನು ಸಹ ಮಾಡಲಾಗುವುದು, ಅದ್ದರಿಂದ ಪ್ರತಿಯೊಬ್ಬರೂ ಸಹ ಇದರಲ್ಲಿ ಭಾಗಿಗಳಾಗಿ ಸ್ವಚ್ಚತೆ ಕಾಪಾಡುವುದರ ಜೊತೆಗೆ ಆರೋಗ್ಯ ರಕ್ಷಣೆ, ಮತ್ತು ದೇವಸ್ಥಾನಗಳ ಪಾವಿತ್ರತೆಯನ್ನು ಕಾಪಾಡೋಣ ಎಂದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಉಮೇಶ್ ಪೂಜಾರ್, ವಿವಿಧ ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿ ಇಡೀ ಗ್ರಾಮದ ದೇವಸ್ಥಾನಗಳ ಸ್ವಚ್ಚತೆಯನ್ನು ಮಾಡುವುದರ ಜೊತೆಗೆ ರಂಗೋಲಿಹಾಕಿ ಅಲಂಕಾರವನ್ನು ಮಾಡಿದ್ದ ಗ್ರಾಮದ ಜನತೆ ಮೆಚ್ಚುವಂತೆ ಮಾಡಿದೆ.