ಶ್ರದ್ಧಾಂಜಲಿ ಕಾರ್ಯಕ್ರಮ

ಹುಬ್ಬಳ್ಳಿ, ಏ 3: ಜೀವನ ಪೂರ್ತಿ ಹೋರಾಟ ಮಾಡುತ್ತಲೇ ಬಡವರು, ದೀನದಲಿತರು, ಅಲ್ಪಸಂಖ್ಯಾತರು, ಬಿಡಿ ಕಾರ್ಮಿಕರು, ರೀಕ್ಷಾ ಚಾಲಕರ ಶ್ರಯೋಭಿವೃದ್ದಿಗೆ ಶ್ರಮಿಸಿ ಹೋರಾಟ ಮಾಡಿದ ಎ.ಜೆ. ಮುಧೋಳ ಅವರು ಎಲ್ಲರ ಮನದಲ್ಲಿ ಸವಿ ನೆನಪಾಗಿ ಉಳಿದಿದ್ದಾರೆ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಚೇತನ ಚಂದ್ರಶೇಖರ ಅಳಗುಂಡಗಿ ಹೇಳಿದರು.
ಹಳೇ ಹುಬ್ಬಳ್ಳಿಯಲ್ಲಿರುವ ಎ.ಜೆ. ಮುಧೋಳ ಭವನದಲ್ಲಿ ಮುಧೋಳ ಅವರ 23ನೇ ಪುಣ್ಯಸ್ಮರಣೆ ದಿನದ ಅಂಗವಾಗಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಧೋಳ ಅವರು ಕಷ್ಟದಲ್ಲಿರುವ ಬಡವರಿಗೆ ಕಾರ್ಮಿಕರಿಗೆ ಸಹಾಯ ಸಹಕಾರ ಮಾಡುತ್ತಿದ್ದರು ಎಂದರು.
ಪಾಲಿಕೆ ಮಾಜಿ ಸದಸ್ಯ ಬಾಲಚಂದ್ರ ಗಂಗೂರ, ರೈತ ಹೋರಾಟಗಾರ ಸಿದ್ದು ತೇಜಿ, ನಜೀರಅಹ್ಮದ ಕೋಲಕಾರ, ಅನ್ವರ ಮುಧೋಳ, ಶೆಪೀ ಮುದ್ದೇಬಿಹಾಳ, ಯುಸೋಪ್ ಬಳ್ಳಾರಿ, ಬಾಬಾಜಾನ ಮುಧೋಳ, ಆಶೀಪ್ ಪಾಚಾಪುರ್, ರಮೇಶ ಬೂಸ್ಲೆ, ದೇವಾನಂದ ಜಗಾಪುರ, ಸಾಜಿದ ಹಾಲಬಾವಿ, ಬಸೀರ ಮುದೋಳ, ಪೀರಸಾಬ ನದಾಫ್, ಅಬ್ದುಲಹಮೀದ ಕೊಪ್ಪಳ, ಸಾದೀಖ ಪಾಸ್ಕಿ, ಕರೀಮ ಲಕ್ಕುಂಡಿ, ಬಾಷಾ ಟಾಕೀವಾಲೆ ಇದ್ದರು.