ಶ್ರದ್ದೆ, ಭಕ್ತಿಯಿಂದ ರಾಮನವಮಿ ಆಚರಣೆ

ಚಿಟಗುಪ್ಪ: ಏ.18:ರಾಮನವಮಿಯನ್ನು ಪಟ್ಟಣದ ಕುನಬಿವಾಡ ಓಣಿಯಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಶ್ರದ್ದೆ, ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿ ರಾಮನವಮಿ ಆಚರಿಸಲಾಯಿತು.
ಶ್ರೀರಾಮ ಉತ್ಸವ ಕಮಿಟಿ ಅಧ್ಯಕ್ಷ ಸಾಯಿ ಶಿರ್ಕೆ ರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಕುನಬಿವಾಡ ಓಣಿಯಲ್ಲಿರುವ ಹನುಮಾನ ದೇವಸ್ಥಾನದಿಂದ ಭವ್ಯ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಉದ್ದಕ್ಕೂ ಯುವಕರು ಜೈ ಶ್ರೀರಾಮ ಘೋಷಣೆ ಹಾಕುತ್ತಾ ಮೆರವಣಿಗೆ ಶ್ರೀರಾಮನ ದೇವಸ್ಥಾನಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ , ಕಾಶಿನಾಥ್ ರೆಕುಲಗಿ. ಕಾಳಪ್ಪ ಕಟ್ಟಗಿ ಶ್ರೀಕಾಂತ್ ಅಂತರೆಡ್ಡಿ. ಅಮರ್ ರೆಡ್ಡಿ ಪವನ್ ಪೂಜಾರಿ ಅಭಿಷೇಕ್ ಆಕಾಶ ಗುತ್ತೆದಾರ್, ಉಮೇಶ್ ರೆಡ್ಡಿ. ರಾಜು ಪೂಜಾರಿ ರಮೇಶ್ ಪರ ಸಿದ್ದು ಸೋನಾರ್. ಗಣೇಶ್ ಎಖೆಲ್ಲಿ. ಸಿದ್ದು ಬೆಂಕಿಪಲ್ಲಿ ಸಾಯಿ ಶಿರಕೆ ಸೇರಿದಂತೆ ಶ್ರೀರಾಮನ ಭಕ್ತರು ಇದ್ದರು.