
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ: ಸೆ.04:- ಶ್ರದ್ದೆ ಮತ್ತು ಆಸಕ್ತಿಯಿಂದ ಹೈನುಗಾರಿಕೆ ಮಾಡಿದರೆ ಹೈನೋದ್ಯಮ ನಿಮ್ಮನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಆರ್ಥಿಕವಾಗಿ ಸ್ವಾವಲಂಭಿಯಾಗಬಹುದು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಮರಡಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಬಿಎಂಸಿ ಹಾಲು ಶಿಥಲೀಕರಣ ಘಟಕದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ 25 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕೇವಲ ಆಡಳಿತ ಮಂಡಳಿ ಮಾತ್ರ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಸಾಲದು ಸಂಘದ ಸರ್ವ ಸದಸ್ಯರು ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿ ಕೆಲಸ ಮಾಡಿದಾಗ ಸಹಕಾರ ಸಂಘಗಳು ಪ್ರಗತಿ ಸಾಧಿಸುತ್ತವೆ. ಈ ನಿಟ್ಟಿನಲ್ಲಿ ಮರಡಹಳ್ಳಿ ಗ್ರಾಮ ಇಲ್ಲಿಯವರೆಗೂ ಗುಣಮಟ್ಟದ ಹಾಲು ನೀಡುವಿಕೆ, ಸಂಘದ ಏಳಿಗೆ, ಸದಸ್ಯರ ಆಶೋತ್ತರಗಳ ನೆರವೇರಿಕೆ ಮುಂತಾದುವುಗಳ ವಿಚಾರದಲ್ಲಿ ಪರಸ್ಪರ ಸಹಕಾರದಿಂದ ನಡೆಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯ. ಕೃಷಿಯ ಜೊತೆಗೆ ಹೈನುಗಾರಿಕೆಗೆ ಆದ್ಯತೆ ನೀಡಿರುವ ನೀವುಗಳು ಆ ಕ್ಷೇತ್ರದಲ್ಲಿ ಶ್ರದ್ದೆಯಿಂದ ಆಸಕ್ತಿಯಿಂದ ಹೈನುಗಾರಿಕೆ ಮಾಡಿದ್ದಲ್ಲಿ ಗೋಮಾತೆ ನಿಮ್ಮನ್ನು ಕೈ ಹಿಡಿಯುತ್ತದೆ. ನೀವು ಆರ್ಥಿಕವಾಗಿ ಸಬಲರಾಗುತ್ತೀರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ದೇವಮ್ಮಸಿದ್ದೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ನಿರ್ಮಲ, ಶೈಲಜ, ಗ್ರಾಪಂ ಸದಸ್ಯ ಪ್ರತೀಪ್, ಮಾಜಿ ಉಪಾದ್ಯಕ್ಷೆ ನಂಜಮ್ಮ, ಗ್ರಾಪಂ ಮಾಜಿ ಸದಸ್ಯರಾದ ತುಕಾರಾಂ, ರಾಜಾಚಾರಿ, ಲಕ್ಷ್ಮಣ್, ನಿವೃತ್ತ ಶಿಕ್ಷಕ ತಿಮ್ಮೇಗೌಡ, ಪಿಎಲ್‍ಡಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಾಗೇಗೌಡ, ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪಅಲ್ಲಿಬಾದಿ, ಪ.ಬೋರೇಗೌಡ, ಸೋಮಶೇಖರ್, ಸುಶೀಲಮ್ಮ, ಲತಾ, ಹೊನ್ನಮ್ಮ, ಯಶೊಧ, ಮಂಜುಳ, ಕಾರ್ಯದರ್ಶಿ ಮಂಗಳ ಸೇರಿದಂತೆ ನೂರಾರು ಸದಸ್ಯರುಗಳು ಗ್ರಾಮಸ್ಥರು ಹಾಜರಿದ್ದರು.