ಶ್ರದ್ದೆಯಿಂದ ಓದಿ ಆದರ್ಶ ವ್ಯಕ್ತಿಗಳಾಗಿ:ಶಂಕರಗೌಡ

ಇಂಡಿ :ಮಾ.11:ಲಚ್ಯಾಣ ಗ್ರಾಮವು ಒಂದು ಪುಣ್ಯಭೂಮಿ ಶರಣರು ಸಂತರು ಪವಾಡ ಪುರುಷರು ಆಗಿ ಹೋದಂತ ಪುಣ್ಯಸ್ಥಳ ಅದರಲ್ಲೂ ತಾಲೂಕಿನಾದ್ಯಂತ ಅನೇಕ ಸಾಹಿತಿಗಳು ಹಲಸಂಗಿಯ ಮಧುರ ಚೆನ್ನ ಸಿಂಪಿಲಿಂಗಣ್ಣ ಶ್ರೀರಂಗರು ಘಟಾನುಘಟಿ ಸಾಹಿತಿಗಳನ್ನ ಈ ನಾಡಿಗೆ ಪರಿಚಯಿಸಿದಂತ ನಾಡು ಶಿಕ್ಷಣ ದಾಸೋಹಿ ಶ್ರೀ ಸಂಗನಬಸವ ಶಿವಯೋಗಿಗಳು ನಡೆದಾಡಿದ ಪುಣ್ಯಭೂಮಿ ಸುಕ್ಷೇತ್ರ ಎಂದು ಶರಣಗೌಡ ಗೌಡರ ಹೇಳಿದರು. ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಸಂಗನಬಸವೇಶ್ವರ ಕೃಷಿ ಮಾಧ್ಯಮಿಕ ಶಾಲೆಯ ಹತ್ತನೇ ತರಗತಿಯ ಮಕ್ಕಳ ಬಿಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿರುವ ಅವರು ಹಲಸಂಗಿ ಗೆಳೆಯರ ಬಳಗದ ಶ್ರೀರಂಗರು ಬರೆದಂತಹ ನಾಟಕಗಳು ವಿಶ್ವದಾದ್ಯಂತ ಅಭಿನಯ ಗೊಳ್ಳುತ್ತವೆ ಎಂದರು.ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಅಂನ್ಯುನ್ಯ ವಾಗಿರಬೇಕು ಚಾಣಕ್ಯ ಚಂದ್ರಗುಪ್ತನಿಗೆ ಅತ್ಯುತ್ತಮ ಗುರುಗಳಾಗಿದ್ದರು ಎಂದು ಹೇಳಿದರು. ವಿದ್ಯಾರ್ಥಿಗಳು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಲಂಡನಿನ ಸ್ಕೂಲ್ ಆಫ್ ಏಕೋನಾಮಿಕ್ಸ್ ಅಂಬೇಡ್ಕರ ಅವರನ್ನು ಡಾಕ್ಟರೇಟ್ ಪದವಿ ಪ್ರಧಾನ ಮಾಡುವಾಗ ಆಲ್ ಸೈನ್ಸ್ ಪದವಿಯನ್ನು ಪ್ರಧಾನ ಮಾಡಿದರು ಎಂದು ಹೇಳಿದರು. ಸ್ವಾಮಿ ವಿವೇಕಾನಂದರು ಒಬ್ಬ ಉತ್ತಮ ಆದರ್ಶ ವಿದ್ಯಾರ್ಥಿಯಾಗಿದ್ದರು ಅವರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅವರು ಆಧ್ಯಾತ್ಮಿಕ ಭಾಷಣಗಳನ್ನು ಮಾಡುವ ಮೂಲಕ ಬಂದಂತ ಹಣವನ್ನು ಭಾರತ ದೇಶದ ಬಡತನ ಮತ್ತು ಹಸಿವನ್ನು ನೀಗಿಸಲು ರಾಮಕೃಷ್ಣ ಪರಮಹಂಸ ಆಶ್ರಮಕ್ಕೆ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದರು ಎಂದು ಹೇಳಿದರು. ಶಾಲೆಯ ಮುಖ್ಯ ಗುರುಗಳಾದ ಎಸ್ ಎಸ್ ಟಿಂಗರಿ ವಿದ್ಯೆ ಸಂಸ್ಕಾರ ಮತ್ತು ವಿನಯವನ್ನು ಕಲಿಸುತ್ತದೆ ಮಕ್ಕಳು ಹಿರಿಯರಿಗೆ ಹಣೆಮಣಿದು ನಮಸ್ಕರಿಸಿದರೆ ಅಹಂಕಾರ ಅಳಿದು ಹೋಗುತ್ತದೆ ಎಂದು ಹೇಳಿದರು. ಅತ್ಯುತ್ತಮ ಅಂಕಗಳನ್ನು ಪಡೆದ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕೊಡುವ ಮೂಲಕ ಸನ್ಮಾನಿಸಲಾಯಿತು ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಬಸವಲಿಂಗ ಅಜ್ಜನವರು ವಹಿಸಿದರು, ಗ್ರಾಮ ಪಂಚಾಯತ್ ಸದಸ್ಯ ಅಶೋಕಗೌಡ ಪಾಟೀಲ ಜ್ಯೋತಿ ಬೆಳಗಿಸಿದರು, ರಾಜು ನದಾಫ್, ರಾಜೇಂದ್ರ ಹತ್ತಳ್ಳಿ, ಯಶವಂತ ಬಿರಾದಾರ, ಸುರೇಶ ವಾಲಿ, ಹಿರಿಗಪ್ಪಾ ಪೂಜಾರಿ, ರಮೇಶ್ ಚವ್ಹಾಣ, ಮಲಕ್ಕಣ್ಣ ಗುಬ್ಬೆವಾಡ, ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.