ಶ್ರದ್ದೆಯಿಂದ ಅಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಿ


ಗುಳೇದಗುಡ್ಡ,ಮಾ.12: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಟಿ.ವಿ, ಮೊಬೈಲ್‍ಗಳಿಗೆ ದಾಸರಾಗುವುದನ್ನು ಬಿಡಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಶ್ರದ್ದೆಯಿಂದ ಅಭ್ಯಾಸ ಮಾಡಿ ಉತ್ತಮ ವಿಚಾರ, ನೆಲದ ಸಂಸ್ಕøತಿ ಕಲಿತು ಶಾಲೆ ಕುಟುಂಬದ ಹೆಸರು ತರಬೇಕು ಎಂದು ಸಮಾಜ ಸೇವಕಿ ಶ್ರೀಮತಿ ಕವಿತಾ ದೇವರಡ್ಡಿ ಹೇಳಿದರು.
ಅವರು ತಾಲ್ಲೂಕಿನ ಕೆಲವಡಿ ಗ್ರಾಮದ ಲಕ್ಷ್ಮೀ ರಂಗನಾಥ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ದೀಪದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆಯ ಮುಖ್ಯಶಿಕ್ಷಕ ಬಿ.ವ್ಹಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಶಿಕ್ಷಕ ಅರುಣ ವಿ. ದಡ್ಡಿ, ಎಸ್.ಎಸ್. ಕಡಿ, ಬಾಲಾಜಿ ಮಂಕಣಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕಿ ಶ್ರೀಮತಿ ಕವಿತಾ ದೇವರಡ್ಡಿ ಅವರನ್ನು ಸನ್ಮಾನಿಸಲಾಯಿತು. 9ನೇ ತರಗತಿ ವಿದ್ಯಾರ್ಥಿಗಳಿಂದ ದೀಪದಾನ ಮಾಡುವ ಮೂಲಕ 10ನೇ ತರಗತಿಗೆ ಸ್ವಾಗತಿಸಲಾಯಿತು.
ಅತಿಥಿಗಳಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಂಡುರಂಗ ಕಂಬಾರ, ಪ್ರಗತಿಪರ ರೈತ ಹೊನ್ನಪ್ಪಗೌಡ ರಂ. ಗೌಡರ, ಸಂಗೀತ ವಿದ್ಯಾಲಯದ ಪ್ರಾಚಾರ್ಯ ಅಖಂಡೇಶ್ವರ ಎಂ. ಪತ್ತಾರ, ತಾಲ್ಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ಮಾಚಾ, ಎಸ್.ಡಿ.ಎಂ.ಸಿ ಸದಸ್ಯ ಮಾದರ, ಬಡಕನ್ನವರ, ಶಾಲೆಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ಮೂಲಿಮನಿ, ಶ್ರೀಮತಿ ಶಕುಂತಲಾ ಬಾದಾಮಿ, ಶ್ರೀಮತಿ ಪಾರ್ವತಿ ಎಚ್. ತೊಗರಿ, ಶಾಲಾ ಪ್ರಧಾನ ಮಂತ್ರಿ ಕುಮಾರಿ, ಮಂಜುಳಾ ಸಿಂಗನ್ನವರ ಇತರರು ಇದ್ದರು. ಶಿಕ್ಷಕ ಐ.ಬಿ. ಕೋತಿನ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಎಸ್.ಬಿ. ಮಾಚಾ ನಿರೂಪಿಸಿದರು. ಶಿಕ್ಷಕಿ ಪಾರ್ವತಿ ತೊಗರಿ ವಂದಿಸಿದರು.