ಶ್ರದ್ದಾ ಭಕ್ತಿ ಎಂಬುದು ಸೇವಾಕಾರ್ಯದಲ್ಲಿರಲಿ: ದಾನಮ್ಮ

ತಾಳಿಕೋಟೆ:ಆ.14: ಶ್ರದ್ದಾ ಭಕ್ತಿಯನ್ನಿಟ್ಟುಕೊಂಡು ದುಡಿಮೆಯಲ್ಲಿ ಮುಂದುವರೆದರೆ ಅದಕ್ಕೆ ದೇವರು ಮೆಚ್ಚುತ್ತಾನೆಂಬುದನ್ನು ಹೇಳಿದ ಹಿರಿಯರ ಮಾತು ಸತ್ಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಘದ ಸೇವಾ ಪ್ರತಿನಿಧಿಯಾದ ಶ್ರೀಮತಿ ದಾನಮ್ಮ ಈಜೇರಿ ಅವರು ನುಡಿದರು.

ರವಿವಾರರಂದು ಸಂಘದ ಸದಸ್ಯರೊಂದಿಗೆ ಸ್ಥಳೀಯ ಶ್ರೀ ಗ್ರಾಮದೇವತೆಯ ಮಂದಿರದ ಆವರಣ ಹಾಗೂ ಶ್ರೀ ಕೃಷ್ಣದೇವಾಲಯದ ಆವರಣಗಳನ್ನು ಸ್ವಚ್ಚಗೊಳಿಸಿ ಸ್ವಚ್ಚತೆಯ ಕುರಿತು ಮಾತನಾಡಿದ ಅವರು ಪ್ರತಿವರ್ಷ ಅಲ್ಲದೇ ವರ್ಷದ ಮಧ್ಯದ ದಿನಮಾನಗಳಲ್ಲಿಯೂ ಸಹ ನಮ್ಮ ಸಂಘ ಮಂದಿರಗಳ ಸ್ವಚ್ಚತೆಯ ಕಾರ್ಯ ಕೈಗೊಂಡು ಆವರಣಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ ಇಂತಹ ಸೇವಾ ಕಾರ್ಯದಿಂದ ದೇವಾಲಯಕ್ಕೆ ಬರುಹೋಗುವ ಭಕ್ತರಿಗೆ ಅನುಕೂಲವಾಗಲಿದೆ ಅಲ್ಲದೇ ಆವರಣಗಳು ಅಲ್ಲಲ್ಲಿ ಕಲುಷಿತಗೊಳ್ಳದೇ ಸ್ವಚ್ಚತೆಯಿಂದ ಕೂಡಿರುವದರಿಂದ ರೋಗರುಜಿಗಳನ್ನು ತಡೆಗಟ್ಟಲು ಅನುಕೂಲವಾಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕಸ್ತೂರಿಬಾಯಿ ಬಿದರಕುಂದಿ, ಹಾಗೂ ಜನ ಸದಸ್ಯರು ಪಾಲ್ಗೊಂಡು ಆಯಾಬಡಾವಣೆಯ ನಾಗರಿಂದ ಮೆಚ್ಚುಗೆಗೆ ಪಾತ್ರರಾದರು.