ಶ್ರದ್ದಾ ಭಕ್ತಿಯ ಸಂಕೇತ ಬಕ್ರೀದ್ ಮನೆ ಮಸೀದಿಗಳಲ್ಲಿ ಪ್ರಾರ್ಥನೆ

ಬಳ್ಳಾರಿ ಆ 01 : ಬಲಿದಾನದ ಬಕ್ರಿದ್ ಹಬ್ಬ ಶ್ರದ್ದಾ ಭಕ್ತಿಯ ಸಂಕೇತ. ಪ್ರವಾದಿ ಇಬ್ರಾಂಹಿ ಗುಲಾಮಳಾಗಿದ್ದ ಹಾಜಿರಳ ವಿವಾಹವಾಗುತ್ತಾರೆ. ಅವರಿಗೆ ಇಸ್ಮಯಿಲ್ ಎಂಬ ಮಗ ಹುಟ್ಟುತ್ತಾನೆ. ಆತನನ್ನು ಬಲಿಕೊಡಬೇಕೆಂದು ಅಲ್ಲಾ ಸಂದೇಶ ಬಲಿಕೊಡುವಾಗ ಕುರಿಯಾಗಿ ಬೀಳುತ್ತದೆ ಅದರ ನೆನಪಿಗಾಗಿ ಅಂದು ಒಂದು ವರ್ಷಕ್ಕೂ ಮೀರಿದ ಕುರಿ ಮೇಕೆ. ಒಂಟೆ, ಧನಗಳನ್ನು ಬಲಿ ಕೊಟ್ಟು ಮೂರು ಬಾಗಮಾಡಿ ಒಂದು ತನಗೆ ಇನ್ನೊಂದು ಬಡ ಜನರಿಗೆ ಮತ್ತೊಂದು ಸಂಬಂಧಿಕರಿಗೆ ಹಂಚುವುದು ಈ ಹಬ್ಬದ ಸಂದೇಶವಾಗಿದೆ ಇದನ್ನೇ ಖುರ್ಬಾನಿ ಎನ್ನಲಾಗುತ್ತದೆ.
ಇಸ್ಲಾಮಿನ ಇತಿಹಾಸದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ನಡೆದಿದ್ದ ಘಟನೆಯೊಂದರ ಜತೆ ಬೆಸೆದುಕೊಂಡಿರುವ ಈದ್ ಉಲ್ ಅದ್‍ಹಾ' ಹಬ್ಬ ಮತ್ತೆ ಬಂದಿದೆ. ತ್ಯಾಗ-ಬಲಿದಾನದ ಈ ಹಬ್ಬ ಭಾರತದಲ್ಲಿಬಕ್ರೀದ್’ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.
ಕೋವಿಡ್ ಕಾರಣ ಈ ಬಾರಿ ಹಬವನ್ನ್ಬು ಸರಳವಾಗಿ ಆಚರಿಸುತ್ತಿದೆ. ಈದ್ಗಾ ಮೈದಾನಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಹೆಚ್ಚು ಜನರು ಬಂದ ಮಸೀದಿಗಳಲ್ಲಿ ತಂಡಗಳಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೋವಿಡ್ ನಿಂದ ಈ ಬಾರಿ ಹೆಚ್ಚಿನ ಸಡಗರ ಸಂಭ್ರಮ ಕಾಣಲಿಲ್ಲ, ಅನೇಕರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಸೀದಿಗಳ ಬಳಿ ಒಂದಿಷ್ಟು ಜನ ಪರಸ್ಪರ ಶುಭಾಷಯಗಳನ್ನು ವಿನಮಯ ಮಾಡಿಕೊಂಡ ದೃಶ್ಯ ಕಂಡು ಬಂತು.