ತಾಳಿಕೋಟೆ:ಎ.5: ಮಹಾವೀರ ತೀರ್ಥಂಕರರು ಜೈನ ಧರ್ಮಕ್ಕೆ ಯಾವಾಗಲೂ ಸತ್ಯಮತ್ತು ಅಹಿಂಸೆಯ ಮತ್ತು ಬಧುಕು, ಮತ್ತು ಬಧುಕಲು ಬಿಡು ಎಂಬ ಸಂದೇಶವನ್ನು ಸಾರಿದ್ದಾರೆ ಕಾರಣ ಮುಂದಿನ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಬೇಕಾಗಿದೆ ಎಂದು ಬಾಬಾನಗರದ ಪ್ರತಿಷ್ಠಾಚಾರ್ಯರಾದ ವೃಷಭಉಪದ್ಯಾಯ ಅವರು ನುಡಿದರು.
ಮಂಗಳವಾರರಂದು ಸ್ಥಳೀಯ ಜೈನ ಸಮಾಜದ ವತಿಯಿಂದ ಜೈನ ಸಮಾಜದ ಕೈಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ 1008 ಭಗವಾನ್ ಶ್ರೀ ಮಹಾವೀರ ತಿರ್ಥಂಕರರ 2622ನೇಯ ಜನ್ಮ ಕಲ್ಯಾಣ ಮಹೋತ್ಸವ ಕುರಿತು ಏರ್ಪಡಿಸಲಾದ ದಾರ್ಮಿಕ ಸಭೆಯಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಮಾನವ ಶ್ರೇಷ್ಠನಾಗಬೇಕಾದರೆ ಹುಟ್ಟಿನಿಂದ ಅಲ್ಲಾ ಧರ್ಮದಿಂದ ಎಂದು ಹೇಳಿದ್ದರೆಂದರು. ದೇವ ಪೂಜೆ ಗುರು ಉಪಾಸನೆ ಸ್ವಾದ್ಯಾಯ ಮನುಷ್ಯ ಸಯಂಮ ತಪ ಹಾಗೂ ದಾನ ಇವು ಆರು ಪ್ರತಿಯೊಬ್ಬ ಗ್ರಹಸ್ತ ಶ್ರಾವಕನು ಪ್ರತಿದಿನ ಆಚರಿಸಲೇಬೇಕಾದ ಅವಶ್ಯ ಕರ್ತವ್ಯಗಳಾಗಿವೆ ಎಂದರು. ಮನುಷ್ಯನಲ್ಲಿ ಶ್ರದ್ದಾ ಮತ್ತು ಭಕ್ತಿ ಎಂಬುದು ಬೇಕು ಮೊದಲು ಧರ್ಮದಲ್ಲಿ ತೊಡಗಬೇಕು ಸಂಸಾರ ತ್ಯಾಗ ಬೇಡಾ ಆದರೆ ಇತರ ನೇಮವನ್ನು ಪಾಲನೆ ಮಾಡುವದು ಅಗತ್ಯವಾಗಿದೆ ಎಂದರು. ಯಾವಾಗಲೂ ಅಹಿಂಸಾ ತತ್ವವಾದಿಗಳಿರಬೇಕು ಶ್ರದ್ದಾ ಭಕ್ತಿ ಎಂಬುದಿರಲಿ ಎಂದು ಭಗವಾನ್ ಮಹಾವೀರರ ತತ್ವ ಸಿದ್ದಾಂತಗಳು ಹೇಗಿದ್ದವೆಂಬುದನ್ನು ಬಹು ಮಾರ್ಮಿಕವಾಗಿ ವಿವರಿಸಿದರು.
ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ವಿದ್ಯಾಧರ ಯಾತಗಿರಿ ಯವರು ಮಾತನಾಡಿ ಭಗವಾನ್ ಮಹಾವೀರರು ಹುಟ್ಟು ಮತ್ತು ಮೋಕ್ಷದ ವಿಷಯ ಕುರಿತು ಅವರು ಸಂದೇಶ ಸಾರಿದ್ದಾರೆ ಅಹಿಂಸೆ ಸತ್ಯ ಆಚಾರ ಬ್ರಹ್ಮಚಾರ್ಯ ಅಂತವುಗಳನ್ನು ಪಾಲಿಸಬೇಕೆಂಬುದರ ಕುರಿತು ಹಿರಿಯ ತಿರ್ಥಂಕರರು ಹೇಳಿದ್ದಾರೆ 24ನೇ ತಿರ್ಥಂಕರರೇ ಭಗವಾನ್ ಮಹಾವೀರರು ಆಗಿದ್ದಾರೆಂದರು. ಕೇವಲ ಜೈನ ಧರ್ಮಿಯರೆಂಬುದು ಹೇಳುವದು ಬೇಡಾ ಆಚರಣೆಯಿಂದ ಜೈನರಾಗಿ ಎಂದು ಅವರು ಹೇಳಿದ್ದಾರೆ ಪಂಚತತ್ವ ಪರಿಪಾಲಕರು ಜೈನಧರ್ಮದವರಾಗಿದ್ದಾರೆಂದು ಪಂಚತತ್ವ ಪಾಲನೆ ಮಾಡಬೇಕಾಗುವದರ ಕುರಿತು ವಿವರಿಸಿದರು. 6ನೇ ಶತಮಾನದಲ್ಲಿ ಈ ಏಷಿಯಾ ಖಂಡ ಹೇಗಿತ್ತು ಎಂಬುದರ ಕುರಿತು ತಿಳಿ ಹೇಳಿದ ಅವರು ಜನರಲ್ಲಿ ಸ್ವಾರ್ಥ ಭಾವನೆ ಎಲ್ಲಡೆಯಲ್ಲಿಯೂ ಕಲಹ ಯಜ್ಞಯಾಗಾದಿಗಳಲ್ಲಿ ಪಾಲ್ಗೊಳ್ಳದೇ ಪ್ರಾಣಿಗಳ ಬಲೆಕೊಡುವಂತಹ ಕಾರ್ಯ ನಡೆಯುತ್ತಿತ್ತು ಇದೆಲ್ಲವನ್ನು ಹೋಗಲಾಡಿಸಲು ಭಗವಾನ್ ಬುದ್ದ ಮಹಾವೀರರು ಅವತರಿಸಿ ಬಂದು ಅಹಿಂಸೆಯ ಪರಿಪಾಲನೆ ಮಾಡಿದವರಾಗಿದ್ದಾರೆಂದರು. ಇಂತಹ ಸಂದೇಶಗಳನ್ನು ಜನರಲ್ಲಿ ಪ್ರೀತಿಯೊಂದಿಗೆ ತೆಗೆದುಕೊಂಡು ಹೋಗಬೇಕೆಂದು ಸಲಹೆ ನೀಡಿದ ಯಾತಗಿರಿ ಅವರು ಶಾಂತಿ ಆಗಬೇಕಾದರೆ ಶಾಂತಿ ಸಾಗರ ಮುನಿಗಳನ್ನು ಕೇಳಿದಾಗ ಪಾಪದಲ್ಲಿ ತೊಡಗಿದವರು ತ್ಯಾಗ ಮಾಡಿದರೆ ಶಾಂತಿ ಸ್ಥಾಪನೆಯಾಗುತ್ತದೆ ಎಂಬುದನ್ನು ತಿಳಿಸಿದ್ದಾರೆಂದು ಬಹು ಮಾರ್ಮಿಕವಾಗಿ ಭಗವಾನ್ ಮಹಾವೀರರ ಇತಿಹಾಸ ವಿವರಿಸಿದರು.
ಇನ್ನೋರ್ವ ಉಪನ್ಯಾಸಕಿಯಾಗಿ ಆಗಮಿಸಿದ ಶ್ರೀಮತಿ ನಿವೇದಿತಾ ಅಕ್ಷಯಕುಮಾರ ಗೋಗಿ ಅವರು ಮಾತನಾಡಿ ಅಹಿಂಸಾ ಪರಮೋಧರ್ಮ ಎಂಬಂತೆ ಧರ್ಮದ ವಿಷಯದೊಂದಿಗೆ ಮುನ್ನಡೆದವರಿಗೆ ವೈರಾಗ್ಯ ಪ್ರಾಪ್ತವಾಗುತ್ತದೆ ನಾನು ತೀರ್ಥಂಕರ ಆಗುವೆ ಎನ್ನುವ ಭಾವನೆ ಹೊಂದಿದ್ದ ಭಗವಾನ್ ಮಹಾವೀರರು ತಮ್ಮ ಭಾವನೆಯಂತೆ ಮುನ್ನಡೆದು ತೋರಿಸಿದ್ದಾರೆ ಪುನರ್ ಜನ್ಮ ಕುರಿತು ಹಾಗೂ ಕಡ್ಡಿ ಹುಲ್ಲುಗಳು ಅಲುಗಾಡಲು ಭಗವಂತನ ಪ್ರೇರಣೆಯೇ ಬೇಕಾಗುತ್ತದೆ ಎಂಬುದನ್ನು ವಿವರಿಸಿದ ಅವರು ಭಗವಾನ್ ಮಹಾವೀರರು ಕ್ರೀ.ಪೂ.599, 27-3-598 ರಂದು ತಂದೆ ಸಿದ್ದಾರ್ಥ, ತಾಯಿ ತ್ರೀಷಿಲಾದೇವಿ ಉದರದಲ್ಲಿ ಜನ್ಮ ತಾಳಿದ ಸವಿಸ್ತಾರ ಅವರ ಜೀವನ ಚರಿತ್ರೆಯನ್ನು ವಿವರಿಸಿದ ಅವರು ಪ್ರಾಣಿ ಹಿಂಸೆ ಮಾಡಬಾರದೆಂಬುದರ ಕುರಿತು ಭಗವಾನ್ ಮಹಾವೀರರು ಹೇಳಿದ ಸಂದೇಶಗಳನ್ನು ವಿವರಿಸಿದರು.
ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಧಾರ್ಮಿಕ ಸಭೆಯನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರವಣ ಬೆಳಗೋಳದ ಕರ್ಮಯೋಗಿ ಚಾರುಕೀರ್ತಿ ಬಟ್ಟಾಚಾರಕ ಪಟ್ಟಾಚಾರ ಮಹಾಸ್ವಾಮಿಜಿ ಇವರ ಭಾವಚಿತ್ರಕ್ಕೆ ಭಾವಪೂರ್ಣ ವಿನಿಯಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಭಗವಾನ್ ಮಹಾವೀರ ತೀರ್ಥಂಕರರ ಭವ್ಯ ಶೋಭಾಯಾತ್ರೆಯು ಕುಂಭ ಕಳಸದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ನಂತರ ಮಂದಿರದಲ್ಲಿ ಭಗವಾನ್ ಮಹಾವೀರರ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಸುಮಂಗಲೆಯರಿಂದ ತೋಟ್ಟಿಲು ಕಾರ್ಯಕ್ರಮ ಜರುಗಿತು.
ವೇದಿಕೆಯ ಮೇಲೆ ಜೈನ ಸಮಾಜದ ಗೌರವಾಧ್ಯಕ್ಷರಾದ ಶ್ರೀಮಂತಕುಮಾರ ಸುರಪೂರ, ಅಧ್ಯಕ್ಷರಾದ ಪದ್ಮರಾಜ ಧನಪಾಲ, ಉಪಾಧ್ಯಕ್ಷ ವಜ್ರಕುಮಾರ ಪ್ರಥಮಶೆಟ್ಟಿ, ಖಜಾಂಚಿ ಕುಲಭೂಷಣ ಹುಬ್ಬಳ್ಳಿ, ಸೀತಲಕುಮಾರ ಉಪದ್ಯಾಯ, ಸುರೇಶ ದೇವೂರ(ಕೊಡೇಕಲ್ಲ), ಹಿರಿಯರಾದ ಗಂಗಣ್ಣ ಸುರಪೂರ, ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ರಾಜಮತಿ ಹುಬ್ಬಳ್ಳಿ, ಶ್ರೀಮತಿ ನಿರ್ಮಲಾ ಸುರಪೂರ, ಸಂತೋಷ ಪ್ರಥಮ ಶೆಟ್ಟಿ, ಅಜೀತ ಸುರಪೂರ, ಪ್ರಭಾಕರ ಗೋಗಿ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ದಾನಿಗಳಿಗೆ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕ ಗುಂಡುರಾವ್ ಧನಪಾಲ ನಿರೂಪಿಸಿದರು. ಪ್ರಕಾಶ ಸುರಪೂರ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ ವಂದಿಸಿದರು.