(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.29: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಗಣಿನಾಡಿನ ಮುಸ್ಲಿಂ ಸಮುದಾಯದ ಜನತೆ ಶ್ರದ್ದೆ ಭಕ್ತಿಯಿಂದ ಇಂದು ಆಚರಿಸಿದರು.
ಬಳ್ಳಾರಿ ನಗರದ ಈದ್ಗಾ ಮೈದಾನದಲ್ಲಿದಲ್ಲಿ ಹೊಸ ಬಟ್ಟೆ ಧರಿಸಿ ಬಂದ ಸಾವಿರಾರು ಮುಸ್ಲಿಂ ಸಮುದಾಯದ ಜನತೆ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೀಡಾ ಸಚಿವ ಬಿ. ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ಪಾಲಿಕೆಯ ಸದಸ್ಯರು ಮೊದಲಾದ ಜನಪ್ರತಿನಿಧಿಗಳ ಭಾಗಿಯಾಗಿ ಸಮಯದಾಯದ ಜನತೆಗೆ ಶುಭಾಶಯ ಕೋರಿದರು. ಕಳೆದ ಹಬ್ಬಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಜೆಪಿಯ ಉನ್ನತ ಮುಖಂಡರು ಈ ಬಾರಿ ಕಾಣಿಸಲಿಲ್ಲ.