ಶ್ರದ್ದಾ ಭಕ್ತಿಯಿಂದ ಜರುಗಿದ ಸಿಡಿಬಂಡಿ ರಥೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,1- ಜಿಲ್ಲೆಯ, ನಾಡಿನ, ನೆರೆಯ ಆಂದ್ರಪ್ರದೇಶದ ಹಲವಡೆಗಳಿಂದ ಬಂದಿದ್ದ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ನಿನ್ನೆ ಸಂಜೆ ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ಜರುಗಿತು.
ಸಂಜೆ 5.30 ರ ಸುಮಾರಿಗೆ ಅಲಂಕೃತ ಸಿಡಿಬಂಡಿಗೆ ಮೂರು ಜೊತೆ ಸಿಂಗರಿಸಿದ ಎತ್ತುಗಳನ್ನು ಕಟ್ಟಿ, ದೇವಸ್ಥಾನದ ಸುತ್ತ ಮೂರು ಸುತ್ತು ಸಿಡಿಬಂಡಿಯನ್ನು ಪ್ರದಕ್ಷಿಣಿ ಹಾಕಲು ಆರಂಭಿಸುತ್ತಿದ್ದಂತೆ. ಬಂದ ಭಕ್ತರು ಹೂ  ಬಾಳೆಹಣ್ಣು, ಉತ್ತತ್ತಿ,  ಕೋಳಿ ಎಸೆದು ತಮ್ಮ ಭಕ್ತಿ ಸಮರ್ಪಿಸಿ ನಮಸ್ಕರಿಸಿದರು.
ಸಿಡಿ ಬಂಡಿ‌ಮುಂದೆ ನಂದಿಕೋಲು, ಸಮಾಳ, ಡೊಳ್ಳು, ಚಂಡೆ ವಾದನ, ತಮಟೆ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. 
ಇದನ್ನು ನೋಡಲು ದೇವಸ್ಥಾನದ ಆವರಣ,  ಸುತ್ತಮುತ್ತಲಿನ ಕಟ್ಟಡಗಳ ಮೇಲೆ  ಜನ ಸೇರಿದ್ದರು. ಬಾನಿನಲ್ಲಿ ಸೂರ್ಯ ಮುಳುಗುವ ವೇಳೆಗೆ ಸಿಡಿಬಂಡಿಯ ಪ್ರದಕ್ಷಿಣಿ ಸಮಾಪ್ತಿಯಾಯಿತು.
ಬಂದಿದ್ದ ಭಕ್ತ ಸಮೂಹ ದೇವಿಯ ದರ್ಶನ ಒಡೆದರು. ರಥೋತ್ಸವದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಸಚಿವ ಶ್ರೀರಾಮುಲು, ಕಾಂಗ್ರೆಸ್ ಪಕ್ಷದ ಯುವ ಮುಖಂಡ ನಾರಾ ಭರತ್ ರೆಡ್ಡಿ, ಮೇಯರ್ ರಾಜೇಶ್ವರಿ ಸುಬ್ಬರಾಯಡು, ಪಾಲಿಕೆ ಸದಸ್ಯರು ಮೊದಲಾದ ಮುಖಂಡರು ಪಾಲ್ಗೊಂಡಿದ್ದರು.
ನಂತರ ಸಂಜೆ ವಿವಿಧ ಕಲಾ ತಂಡಂಗಳಿಂದ ನೃತ್ಯ, ಸಂಗೀತ, ಹಾಡುಗಾರಿಕೆ ಮೊದಲಾದ   ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ದೆರವಸ್ಥಾನದ ಧರ್ಮಕರ್ತರು, ಕಾರ್ಯನಿರ್ವಾಹಕ ಅಧಿಕಾರಿ‌ಹನುಂತಪ್ಪ, ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.