ಶ್ರದ್ದಾಭಕ್ತಿಯಿಂದ ಗುರುಪೂರ್ಣಿಮೆ ಆಚರಣೆ ಮಾಡಿದ ವಿದ್ಯಾರ್ಥಿಗಳು

ದಾವಣಗೆರೆ. ಜು.೧೯; ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಯಿತು.ಬ್ರಹ್ಮಚಾರಿಣಿ ಆರಾಧನಾಮೃತ ಚೈತನ್ಯ ಅಮ್ಮ, ಆಡಳಿತಾಧಿಕಾರಿಯಾದ  ಕೊಟ್ರೇಶಪ್ಪ ಹಾಗೂ ಪ್ರಾಂಶುಪಾಲರಾದ  ವಿವೇಕ್ ಎನ್ ಸಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಗುರುವಿನ ಮಹತ್ವವನ್ನು ಸಾರುವ ನಾಟಕ, ಹಾಡು ಭಾಷಣ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬ್ರಹ್ಮಚಾರಿಣಿ ಆರಾಧನಾಮೃತ ಚೈತನ್ಯ ಅಮ್ಮನವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪಾದ ಪೂಜೆ ಮಾಡುವ ಮೂಲಕ ಸಂಸ್ಕೃತಿ ಪೂಜೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಶಿಕ್ಷಕೇತರ ವರ್ಗ ವಿದ್ಯಾರ್ಥಿಗಳು ಸುಮಾರು 500ಕ್ಕೂ ಹೆಚ್ಚು ಪೋಷಕರು ಪಾಲ್ಗೊಂಡಿದ್ದರು.ಭಜನೆ ಮಹಾಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.