ಶ್ಯಾಮ ನಾಟೀಕರ ನಾಮನಿರ್ದೇಶನಕ್ಕೆ ಮನವಿ

ಕಲಬುರಗಿ,ಮೇ 23: ಮಾದಿಗ ಸಮಾಜದ ಹಿರಿಯನಾಯಕ ಶ್ಯಾಮ ನಾಟೀಕರ ಅವರ ಕಾಂಗ್ರೆಸ್ ಪಕ್ಷದ ನಿಷ್ಠೆಯನ್ನು ಗುರುತಿಸಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಮಾದಿಗ ಸಮಾಜದ ಯುವ ಮುಖಂಡ ಮಂಜುನಾಥ ನಾಲವಾರಕರ ಮನವಿ ಮಾಡಿದರು.ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯಕ್ಕೆ ನ್ಯಾಯ ನೀಡುತ್ತ ಬಂದಿದ್ದು, ಸ್ವಾಗತಾರ್ಹ. ಎಐಸಿಸಿ ಅಧ್ಯಕ್ಷ ಡಾ. ಮಲ್ಲಕಾರ್ಜುನ ಖರ್ಗೆಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಾ, ಪಕ್ಷವನ್ನು ಬೆಳೆಸಲು ಹಗಲು ರಾತ್ರಿ ಎನ್ನದೆ ನಿಷ್ಠಾವಂತ ಕಾರ್ಯಕರ್ತರಾಗಿ ಅನೇಕ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ಯಾಮ ನಾಟೀಕರ ರವರನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ವಿಧಾನ ಪರಿಷತ್ತಿನ ನಾಮನಿರ್ದೇಶನ ಮಾಡಲು ಕೋರಿದರು.ಸುದ್ದಿಗೋಷ್ಠಿಯಲ್ಲಿ ಶ್ರೀಮಂತ ಭಂಡಾರಿ, ಚಂದ್ರಕಾಂತ ನಾಟೀಕರ, ಶಿವಕುಮಾರ ಅಜಾದಪೂರ, ಲಕ್ಕಪ್ಪ ಜವಳಿ ಇನ್ನಿತರರಿದ್ದರು.