ಶೌರ್ಯ ಸಾಹಸಕ್ಕೆ ಇನ್ನೊಂದು ಹೆಸರು ಕುಮಾರರಾಮ

ಸಿರವಾರ,ಆ.೩೦-
ಯುದ್ಧ ತಂತ್ರಗಾರಿಕೆ, ನೀರಾವರಿ ವ್ಯವಸ್ಥೆ, ರಾಜಧರ್ಮ ಪರಿಪಾಲನೆ ಕುಮಾರರಾಮನ ಪ್ರಮುಖ ಗುಣಗಳಾಗಿದ್ದವು. ಅಖಂಡ ಭಾರತ ಪರಕೀಯರ ಕೈವಶವಾಗಿತ್ತು. ಆದರೆ ಕುಮಾರರಾಮನ ಶೂರತ್ವದಿಂದಾಗಿ ಕುಮ್ಮಟದುರ್ಗ ರಾಜ್ಯ ಸ್ವತಂತ್ರವಾಗಿತ್ತು. ಕುಮಾರರಾಮ ಬಲಿಷ್ಠ ಕನ್ನಡ ಧರ್ಮ ಸಾಮ್ರಾಜ್ಯ ಕಟ್ಟಬೇಕು ಎಂದು ಸಂಕಲ್ಪ ಮಾಡಿದ್ದರು’ ಎಂದು ಪಟ್ಟಣ ಪಂಚಾಯತ್ ಸದಸ್ಯ ಸೂರಿ ದುರುಗಣ್ಣ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಾಲ್ಮಿಕಿ ವೃತ್ತದಲ್ಲಿ ಗಂಡುಗಲಿ ಕುಮಾರರಾಮ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಈ ವೇಳೆ ಚಿನ್ನಾನ ನಾಗರಾಜ, ರಂಗನಾಥ ನಾಯಕ, ಗಡ್ಲ ಚನ್ನಬಸವ, ಮಲ್ಲಿಕಾರ್ಜುನ ನಾಯಕ, ದೇವು, ಅಬ್ದುಲ್, ರಾಜಾ ಸೇರಿದಂತೆ ಇತರರು ಇದ್ದರು.